ಮೈಸೂರ :

ಎತಡು ವರ್ಷದ ಗಂಡು ಮಗುವನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೆತ್ತತಾಯಿ ಇಂತದೊಂದು ಮನಕುಲಕುವ ಘಟನೆ  ಮೈಸೂರಿನ ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ಗ್ರಾಮದಲ್ಲಿ ನಡೆದಿದೆ.

2 ವರ್ಷದ ಗಂಡು ಮಗುವನ್ನು ನೀರಿನ ತೊಟ್ಟಿಗೆ ಮುಳುಗಿಸಿ ಕೊಲೆ ಮಾಡಿರುವ ಹೆತ್ತ ತಾಯಿ. ಮಗುವನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಲೆ ಮಾಡಿದ ಬಳಿಕ ತಾನೂ ಕೂಡ ನೇಣು ಬಿಗಿದು ಆತ್ಮಹತ್ಯೆಗೆ ಶರಣು. ಗಟ್ಟವಾಡಿ ಗ್ರಾಮದ ಮಹದೇವ ಪ್ರಸಾದ್ ಅಲಿಯಾಸ್ ರಚ್ಚು  ಎಂಬುವರ ಪತ್ನಿ ಅನ್ನಪೂರ್ಣ (22) ವರ್ಷದ ಮೃತ ವಿವಾಹಿತ ಮಹಿಳೆ ಹಾಗೂ ಮೋಕ್ಷಿತ್ 2 ವರ್ಷದ ಗಂಡು ಮಗು ಸಾವು.

ಕೌಟುಂಬಿಕ ಕಲಹ ಎಂದು ಹೇಳಲಾದರೂ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಚಾಮರಾಜನಗರ ಜಿಲ್ಲೆ ಉಮ್ಮತ್ತೂರು ಗ್ರಾಮದಿಂದ 2 ವರ್ಷಗಳ ಹಿಂದೆ ವಿವಾಹವಾಗಿದ್ದ ಮೃತ ಮಹಿಳೆ ಅನ್ನಪೂರ್ಣ. ಮೃತ ವಿವಾಹಿತ ಮಹಿಳೆ ಅನ್ನಪೂರ್ಣ ಎಂಬುವರ ಪತಿ ಮಹದೇವ ಪ್ರಸಾದ್ ಅಲಿಯಾಸ್ ರಚ್ಚು ಕೃಷಿಕ. ಕೌಟುಂಬಿಕ ಕಲಹಕ್ಕೆ ಬೇಸತ್ತು ನೀರಿನ ತೊಟ್ಟಿಗೆ 2 ವರ್ಷದ ಮಗುವನ್ನು  ಮುಳುಗಿಸಿ ಕೊಲೆ ಮಾಡಿ ತಾನು ಕೂಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಅನ್ನಪೂರ್ಣ.

ತಾಯಿ ಮತ್ತು ಮಗುವಿನ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ನಂಜನಗೂಡಿನ ಡಿವೈಎಸ್ಪಿ ಗೋವಿಂದ ರಾಜು ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ ತಳವಾರ ದೊಡ್ಡಕವಲಂದೆ ಪಿಎಸ್ ಐ ಮಹೇಂದ್ರ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಅಮಾನುಷ ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ಕಲೆ ಹಾಕಿ ಪ್ರಕರಣ ದಾಖಲಿಸಲು ಮುಂದಾದ ನಂಜನಗೂಡು ಪೊಲೀಸರು.