ಉ.ಕ ಸುದ್ದಿಜಾಲ ಚಿಕ್ಕೋಡಿ :

ದ್ವಿಚಕ್ರ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಇದ್ದ ಗಿಡಕ್ಕೆ ದ್ವಿಚಕ್ರ ವಾಹನ ಅಪ್ಪಳಿಸಿದ ಕಾರಣದಿಂದ ಇಬ್ಬರ ಯುವಕರು ಮೃತಪಟ್ಟು ಒಬ್ಬ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಯುವಕರಾದ ಪ್ರಭಾಕರ್ ಗೋಸರವಾಡೆ (45) ಮೋಹನ ಕೋಳಿ (42) ಹಾಗೂ ನಾಗೇಂದ್ರ ಶಿರಹಟ್ಟಿ (35) ಇವರೆಲ್ಲರೂ ಕೂಡಿ ದ್ವಿಚಕ್ರ ವಾಹನ ಮೇಲೆ ಇಂಗಳಯಿಂದ ಶುರುಗುಪ್ಪಿ ಗ್ರಾಮಕ್ಕೆ ಹೋಗುವಾಗ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಪ್ರಭಾಕರ್ ಘೋಸರವಾಡೆ ಹಾಗೂ ಮೋಹನ ಕೋಳಿ ಈ ಇಬ್ಬರ ಯುವಕರಿಗೆ ತಲೆಗೆ ಗಂಭೀರವಾದ ಗಾಯ ಆಗಿ ಹೆಚ್ಚಿನ ರಕ್ತಸ್ರಾವವಾಗಿದ್ದು ಹೆಚ್ಚಿನ ಚಿಕ್ಕಿತ್ಸೆಗಾಗಿ ಹೋಗುವಾಗ ದಾರಿ ಮಧ್ಯ ಇಬ್ಬರು ಮೃತಪಟ್ಟಿದ್ದಾರೆ.

ಆದರೆ ನಾಗೇಂದ್ರ ಶಿರಹಟ್ಟಿ ಇವರ ಕಾಲು ಮುರ್ದಿದ್ದು ಈತನೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಅಂಕಲಿ ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಅಂಕಲಿ ಪೊಲೀಸರು ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಪ್ರಕರಣ ಅಂಕಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಅಂಕಲಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.