ಉ.ಕ ಸುದ್ದಿಜಾಲ ಹುಬ್ಬಳ್ಳಿ :

ದತ್ತ ಪೀಠದಲ್ಲಿ ಶಾಖಾದ್ರಿ‌ ಕುಟುಂಬದವರ ಪೂಜೆಗೆ ಅವಕಾಶ ಮಾಡಿಕೊಡಬಾರದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹ ಚಿಕ್ಕಮಂಗಳೂರಿನ ದತ್ತಪೀಠ ಬಗ್ಗೆ ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟವಾಗಿ ಹೇಳಿದೆ.

ಸೌಹಾರ್ದಯುತವಾಗಿ ಇತ್ಯರ್ಥಗೊಳಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಇಷ್ಟರ ಹೊರತಾಗಿಯೂ ಕೆಲವೊಂದು ಆಚರಣೆ ನಡೆಸಲಾಗುತ್ತಿದೆ. ಈಗ ಶಾಖಾದ್ರಿ‌ ಕುಟುಂಬದವರು ಮತ್ತು ಮುಸ್ಲಿಮರಿಂದ ಪೂಜೆಗೆ ಅವಕಾಶ ಕೊರಿದ್ದಾರೆ.

ಪೂರ್ವಜರ ಸಮಾಧಿಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಿ ಅಂತ ಡಿಸಿಗೆ ಮನವಿ ಸಲ್ಲಿಸಿದ್ದಾರೆ. ಯಾವುದೇ ಕಾರಣಕ್ಕೂ ಪೂಜೆಗೆ ಅವಕಾಶ ಮಾಡಿಕೊಡಬಾರದು. ಅವರಿಗೆ ಅವಕಾಶ ಮಾಡಿಕೊಟ್ಟಲ್ಲಿ ನಮಗೂ ದತ್ತ ಪಾದುಕೆಯ ಬಳಿ ಹೋಮ ಹವನಕ್ಕೆ ಅವಕಾಶ ಮಾಡಿಕೊಡಬೇಕು.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸರ್ಕಾರ ನಡೆದುಕೊಳ್ಳಬೇಕು. ಹೊಸ ಆಚರಣೆಗಳಿಗೆ ಅವಕಾಶ ಮಾಡಿಕೊಡಬಾರದು ಮಾಡಿಕೊಟ್ಟಲ್ಲಿ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.

ದತ್ತ ಪೀಠದಲ್ಲಿ ಶಾಖಾದ್ರಿ‌ ಕುಟುಂಬದವರ ಪೂಜೆಗೆ ಅವಕಾಶ ಮಾಡಿಕೊಡಬಾರದು – ಪ್ರಮೋದ ಮುತ್ತಾಲಿಕ