ಉ.ಕ ಸುದ್ದಿಜಾಲ ಗೋಕಾಕ :

ಬೆಳಗಾವಿ ಟೂ ಕನಕಪುರ ಸಿಡಿ ಕಾರ್ಖಾನೆ ಇದೆ. 2000 ಇಸವಿಯಿಂದ ಸಿಡಿ ಫ್ಯಾಕ್ಟರಿ ಕೆಲಸ ಮಾಡುತ್ತಿದೆ. ಸಿಬಿಐ ತನಿಖೆ ಆದರೇ ಎಲ್ಲವೂ ಬಹಿರಂಗ ಆಗಲಿದೆ ಎಂದು ಗಾವಿ ಜಿಲ್ಲೆಯ ಗೋಕಾಕ್ನಲ್ಲಿ ಎಂ ಎಲ್ ಸಿ ಲಖನ್ ಜಾರಕಿಹೊಳಿ ಡಿ.ಕೆ ಶಿವಕುಮಾರ ಮೇಲೆ ಆರೋಪಿಸಿದ್ದಾರೆ.

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಾನು ಕಾಂಗ್ರೆಸ್ ನಿಂದ ದೂರವಾದೆ. ಆಲ್ಟೋ 800 ನಿಂದ ಬಿಎಂಡ್ಲ್ಯೂ ವರೆಗೆ ಇದೆ. ಬೆಳಗಾವಿಯಲ್ಲಿ ಸಿಡಿ ಪ್ಯಾಕ್ಟರಿ ಕನಕಪುರದ ವರೆಗೆ ಇದೆ. ಓಪನ್ ಆಗಿ ಏನು ಹೇಳಲ್ಲ. ರಮೇಶ ಜಾರಕಿಹೊಳಿಗೆ ಶಕ್ತಿ ಇದೆ ಬಹಿರಂಗವಾಗಿ ಮಾತನಾಡಿದ್ದಾರೆ. ಧೈರ್ಯ ಇಲ್ಲದೇ ಇರೋರು ಮನೆಯಲ್ಲಿ ಕುಳಿತುಕೊಳ್ಳುತ್ತಾರೆ.

ಒಂದು ವರ್ಷದಿಂದ ನಮ್ಮ ಬೇಡಿಕೆ ಇದೆ ಸಿಬಿಐ ವಹಿಸಬೇಕು ಅಂತ ಇದೆ. ಅನೇಕು ನೊಂದು, ಬೆಂದು ಹೋಗಿದ್ದಾರೆ. ಬೆಂಗಳೂರು, ಮುಂಬೈ, ಕೇರಳಾ ವರೆಗೆ ಲಿಂಕ್ ಇದೆ. ಒಂದು ಕ್ಷೇತ್ರದಲ್ಲಿ ನಮ್ಮ ಕುಟುಂಬದ ಅಭಿಮಾನಿಗಳು 20 ಸಾವಿರ ಇದೆ. ದಾಖಲೆ ಬಿಡುಗಡೆ ಮಾಡಬೇಡಿ ಸಿಬಿಐ ಕೊಡಿ ಎಂದು ಹೇಳಿದ್ದೇನೆ.

ಕಾಂಗ್ರೆಸ್ ಸರ್ಕಾರ ಬಿಳಿಸಲು ಬೆಳಗಾವಿ ಶಾಸಕರು ಕಾರಣ. ಜಾರಕಿಹೊಳಿ ಕುಟುಂಬದ ವಿರುದ್ಧ ಷಡ್ಯಂತ್ರ ಮೊದಲಿನಿಂದ ಇದೇ. ಚುನಾವಣೆ 6 ತಿಂಗಳು ಇರೋವಾಗ ಮತ್ತೆ ಜೋರು ಆಗಲಿದೆ. ವಿಷಕನ್ಯ, ಮಟಾಶ ಲೆಗ್ಗ, ರಕ್ತ ಕಣ್ಣಿರೂ ಅಂತ ಜನ ಮಾತನಾಡುತ್ತಾರೆ.

ಸಿದ್ದರಾಮಯ್ಯ ಮಾಜಿ ಆದರು,‌ ಕುಮಾರಸ್ವಾಮಿ ಸರ್ಕಾರ ಹೋಯಿತು. ಸಿಬಿಐ ತನಿಖೆ ಆದರೇ ಎಲ್ಲವೂ ಬಹಿರಂಗ ಆಗಲಿದೆ. ಕೆಪಿಸಿಸಿ ಅಂದರೆ ಕರ್ನಾಟಕ ಪ್ರದೇಶ ಸಿಡಿ ಕಮಿಟಿ ಎಂದು ವ್ಯಂಗ್ಯ ಮಾಡಿದ ಜಾರಕಿಹೊಳಿ.  ಸಂತ್ರಸ್ತರೋ ಸಂತೃಪ್ತರೋ ಗೊತ್ತಾಗಲಿದೆ. ನಾನು ಪಕ್ಷೇತರ ಪರಿಷತ್ ಸದಸ್ಯ, ಸಿದ್ದರಾಮಯ್ಯ, ಖರ್ಗೆ ನಮ್ಮ ಗುರು ಸಿಬಿಐ ತನಿಖೆ ಆದರೇ ಲಂಚ, ಮಂಚ ಎಲ್ಲ ಹೊರಗೆ ಬರಲಿದೆ.

ಯಾರು ಎಲ್ಲಿ ಪ್ಯಾಂಟ್ ಬಿಚ್ಚುತ್ತಾರೆ, ಲುಂಗಿ ಬಿಚ್ಚುತ್ತಾರೆ ಗೊತ್ತಾಗಲಿದೆ. ಕ್ಷೇತ್ರದ ಜನ ಬೆನ್ನಿಗೆ ನಿಂತಿದ್ದಾರೆ. ರಮೇಶ ಜಾರಕಿಹೊಳಿ ನಿವೃತ್ತಿಗೆ ಜನ ಅವಕಾಶ ಕೊಡಲ್ಲ ಎಂದು ಲಖನ ಜಾರಕಿಹೊಳಿ ಹೇಳಿದರು.