ಉ.ಕ ಸುದ್ದಿಜಾಲ ಕಾಗವಾಡ :

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮದಭಾವಿ ಶಾಖೆ ವತಿಯಿಂದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ಯ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ದಿವ್ಯ ಸಾನಿದ್ಯವನ್ನು ವಹಿಸಿದ ಶೈನೇಶ್ವರ ದೇವಸ್ಥಾನದ ಅರ್ಚಕರಾದ ಪ್ರವೀಣ ಶಾಸ್ತ್ರೀ ಹಿರೇಮಠ ಅವರು ನೆತ್ತರ ಹನಿ ಕೊಟ್ಟವನೆ ಧಣಿ ಎಂದು ಸಂದೇಶವನ್ನು ಹೇಳುವದರ ಮುಖಾಂತರ ಕೊರೊನಾ ಸಂದರ್ಭದಲ್ಲಿ ಜನರಿಗೆ ರಕ್ತದ ಅವಶ್ಯಕತೆ ತುಂಬಾ ಇದ್ದು ದಾನ ಮಾಡುವವರು ಶೇಷ್ಠರು ಎಂದು ಹೇಳಿದರು. ನೀವು ರಕ್ತವನ್ನು ದಾನ ಮಾಡುವುದರಿಂದ ಒಂದ ಜೀವವನ್ನು ಉಳಿಸಿದಂತಾಗುತ್ತದೆ ಆ ಜೀವ ಉಳಿದರೆ ದಿನ ನಿತ್ಯ ಒಂದು ಸಲವಾದರು ತಮ್ಮ ಪ್ರಾಣ ಉಳಿಸಿದವರ ಸಲುವಾಗಿ ಪ್ರಾರ್ಥಿಸುತ್ತಾರೆ ಅದರ ಫಲ ತಮಗೆ ದೊರದೆ ದೊರೆಯುತ್ತದೆ ಎಂದು ಹೇಳಿದರು. 

ನಂತರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಪ್ರಮುಖರಾದ ಎಮ್. ಪಿ.ಮೇತ್ರಿ ಯವರು ಮಾತನಾಡಿದರು ರಕ್ತದಾನ ಶ್ರೇಷ್ಠದಾನ ರಕ್ತದಾನವು ಮನುಷ್ಯರ ಪ್ರಾಣ ಉಳಿಸುವ ಸಂಜೀವಿನಿ ಅದರಿಂದ ದಿನನಿತ್ಯ ಎಷ್ಟೊ ಜನರ ಪ್ರಾಣಗಳು ಉಳಿಯುತ್ತವೆ ಅದಕ್ಕಾಗಿ ತಾವುಗಳೆಲ್ಲರು ರಕ್ತದಾನವನ್ನು ಮಾಡಿ ಎಂದು ಜನರಿಗೆ ಹೇಳಿದರು.

ಯುವಕರು ಹಾಗೂ ಗ್ರಾಮದ ಜನರು ಸುಮಾರು 100 ಅಧಿಕವಾಗಿ ಜನರು ರಕ್ತವನ್ನು ನೀಡಿದರು. ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ಆಂಗ್ಲ ಮಾಧ್ಯಮ ಸಂಸ್ಥೆಯ ಅಧ್ಯಕ್ಷರಾದ ಮಹಾದೇವ ಕೋರೆ, ಶ್ರೀ ಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷರಾದ ರೇವಣ್ಣಾ ಪಾಟೀಲ ಗ್ರಾಮದ ಮುಖಂಡರಾದ ಅಪ್ಪಾಸಾಹೇಬ ಚೌಗಲಾ, ಗ್ರಾಮ ಪಂಚಾಯತಿ ಸದಸ್ಯರಾದ ಬಾಳು ಮಗದುಮ, ಡಿ.ಕೆ.ಪವಾರ, ಸಂಜಯ ಅದಾಟೆ, ಮಹೇಶ ಕೇಸ್ತಿ, ಪ್ರವೀಣ ಭಂಡಾರೆ, ಮಹಾಂತೇಶ ಕಾಂಬಳೆ, ತಾತ್ಯಾಸಾಹೇಬ ನಾಯಿಕ, ರಾಮು ಮಗದುಮ, ನಿಜಗುಣಿ ಮಗದುಮ, ವಿಠ್ಠಲ ಅವಳೆ, ಪ್ರಕಾಶ ಜಾಲಿಹಾಳಕರ, ಈಶ್ವರ ಕುಂಬಾರೆ, ಲಕ್ಷ್ಮಣ ಅವಳೆ, ಸಾಗರ ಕಾಂಬಳೆ, ರಾಜು ಭಂಡಾರೆ, ಮೆಹಬುಬ ಮೂಜಾವರ, ವಿನಾಯಕ ಶೇಡಬಾಳ, ಅಮೀತ ಪಾಟೀಲ, ಆಕಾಶ ಹಿರಟ್ಟಿ, ವಿಠ್ಠಲ ಭಂಡಾರೆ, ಪ್ರತಾಪ ಪೂಜಾರಿ, ಮಹಾಂತೇಶ ಬಾಡಗಿ ಹಾಗೂ ಇನ್ನೂ ನೂರಾರು ಜನ ಯುವಕರು ಹಾಗೂ ಗ್ರಾಮದ ಮುಖಂಡರು ಭಾಗಿಯಾಗಿದ್ದರು ಈ ಸಂದರ್ಭದಲ್ಲಿ ಶಾಂತು ಇಬ್ರಾಹಿಂಪೂರ ನಿರೂಪಿಸಿದರು, ಮುರಘೇಶ ಶಾಮಣ್ಣವರ ಎಬಿವಿಪಿ ವಿಭಾಗ ಹಾಸ್ಟೆಲ ಪ್ರಮುಖರು, ಸ್ವಾಗತಿಸಿದರು, ಆನಂದ ಶಿರಹಟ್ಟಿ ವಂದಿಸಿದರು.