ಉ.ಕ ಸುದ್ದಿಜಾಲ ಕುಡಚಿ :

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ  ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಸೋಲಿಸಿದಂತೆ, ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸಲು ಬಿಜೆಪಿ ವರಿಷ್ಠರು ಪಿ.ರಾಜೀವ್ ಅಸ್ತ್ರ ಬಳಕೆಗೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಪುತ್ರನನ್ನು ಸೋಲಿಸಿ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗ ಮಾಡಲು ಬಿಜೆಪಿ ಪಕ್ಷದ ನಾಯಕರು ನೀಲ ನಕ್ಷೆ ಸಿದ್ದಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕುಡಚಿ ಶಾಸಕ ಪಿ ರಾಜೀವ್ ಅವರನ್ನು ಚಿತ್ತಾಪೂರ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸಿ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ರಾಜಕೀಯವಾಗಿ ಕಟ್ಟಿಹಾಕಲು ಬಿಜೆಪಿ ನಾಯಕರು ಒಂದು ಸೂತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ.

ಪಿ.ರಾಜೀವ್ ಬಂಜಾರ ಸಮುದಾಯಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡು ತಾಂಡಾ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾಗಿ ಕಾರ್ಯವನ್ನು ಮಾಡುತ್ತಿದ್ದಾರೆ. ಕಳೆದ ವಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು  ಕಲಬುರಗಿ ಜಿಲ್ಲೆಯ ಸೆಡಂ ತಾಲೂಕಿನ ಮಳಖೇಡ್ ಗ್ರಾಮದಲ್ಲಿ ತಾಂಡಾ ಪ್ರದೇಶಗಳಿಗೆ ಹಕ್ಕು ಪತ್ರ ವಿತರಣೆ ಸಮಾರಂಭದಲ್ಲಿ ಪಿ.ರಾಜೀವ್ ವೇದಿಕೆಯಲ್ಲಿ ಗುರುತಿಸಿಕೊಂಡು ಅಲ್ಲಿನ ಜನರ ಗಮನವನ್ನು ಸೇಳಸಿದ್ದರೂ.

ಎರಡು ಬಾರಿ ಕುಡಚಿ ಕ್ಷೇತ್ರದಿಂದ ಶಾಸಕರಾಗಿರುವ ಪಿ. ರಾಜೀವ್ ಅವರು ಈ ಬಾರಿ ಕ್ಷೇತ್ರ ಬದಲಾವಣೆಗೆ ಸಿದ್ಧತೆ ನಡೆ ಸಿದ್ದು, ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಮತ್ತೊಮ್ಮೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆಂದು ತಿಳಿದುಬಂದಿದೆ ಆದರೆ ಇವೆಲ್ಲ ಮಾತುಗಳನ್ನು ಶಾಸಕ ಪಿ ರಾಜೀವ್ ತಳ್ಳಿ ಹಾಕಿದ್ದಾರೆ.

ಪಕ್ಷದಲ್ಲಿ ಆ ರೀತಿ ಏನು ಚರ್ಚೆ ಆಗಿಲ್ಲ ಪಕ್ಷದ ವರಿಷ್ಠರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಆ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ಆದರೆ ಕ್ಷೇತ್ರ ಬದಲಾವಣೆ ಸತ್ಯಕ್ಕೆ ದೂರವಾಗಿದ್ದು ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆ.

ಕ್ಷೇತ್ರ ಬದಲಾವಣೆಯಿಂದ ಕುಡಚಿ ಮತಕ್ಷೇತ್ರ ಬಿಜೆಪಿ ಟಿಕೆಟ್ ಯಾರಿಗೆ ಎಂಬ ಪ್ರಶ್ನೆ ಈಗಾಗಲೇ ಮತಕಕ್ಷೇತ್ರದಲ್ಲಿ ಹರದಾಡುತ್ತಿದ್ದು, ಕುಡಚಿ ಕ್ಷೇತ್ರಕ್ಕೆ ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಪುತ್ರ ಉಮೇಶ್‌ ಕಾರಜೋಳ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಕಳೆದ ಕೆಲವು ದಿನಗಳಿಂದ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದು, ಸದ್ದಿಲ್ಲದೆ ಚುನಾವಣೆ ತಯಾರಿ ನಡೆಸಿದ್ದಾರೆ. ಮೀಸಲು ಕ್ಷೇತ್ರವಾದ ಕುಡಚಿ ವಿಧಾನಸಭೆಗೆ ಬಿಜೆಪಿಯಿಂದ ಸ್ಪರ್ಧಿಸಿದರೆ ಸುಲಭವಾಗಿ ಗೆಲ್ಲುವ ಲೆಕ್ಕಾಚಾರ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತುವ ಬಿಜೆಪಿ ಈ ಬದಲಾವಣೆಗೆ ಅವಕಾಶ ಕಲ್ಪಿಸುತ್ತದೆಯೇ ಎನ್ನುವುದು ಹಲವರ ಪ್ರಶ್ನೆಯಾಗಿದೆ.

ಕುಡಚಿ ಕ್ಷೇತ್ರದಲ್ಲಿ ಉಮೇಶ್ ಕಾರಜೋಳ ಪ್ರತ್ಯಕ್ಷವಾಗಿದ್ದು ಇದೇ ಜ.20 ಕ್ಕೆ  ಮುಗಳಖೋಡ ಜಾತ್ರೆಯಲ್ಲಿ ಕಾಲೆಂಡರ ಬಿಡುಗಡೆ ಮಾಡುವ ಮೂಲಕ ಮತಕ್ಷೇತ್ರದ ಜನಕ್ಕೆ ಹತ್ತಿರವಾಗುತ್ತಿರುವ ಉಮೇಶ ಕಾರಜೋಳ ಕಳೆದ ಎರಡು ಮೂರು ತಿಂಗಳಿನಿಂದ ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಸಂಚಾರ ಬೆಳೆಸಿ ಸ್ಥಳೀಯ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ.

ಕಳೆದ ಹತ್ತು ದಿನಗಳ ಹಿಂದೆ ಮುಗಳಖೋಡ ಜಾತ್ರೆಯಲ್ಲಿ ತಮ್ಮ ಭಾವಚಿತ್ರವಿರುವ ಕ್ಯಾಲೆಂಡರ್ ಬಿಡುಗಡೆ ಮಾಡಿ ಅಭಿಮಾನಿಗಳ ಮುಖಾಂತರ ಕ್ಷೇತ್ರದ ತುಂಬೆಲ್ಲ ಹಂಚುತ್ತಿದ್ದಾರೆ. ಹಲವು ನಾಯಕರ ಹಾಗೂ ಕಾರ್ಯಕರ್ತರ ಕಾರ್ಯಗಳಲ್ಲೂ ಭಾಗವಹಿಸುತ್ತಿದ್ದಾರೆ.

ಕುಡಚಿ ಕ್ಷೇತ್ರದ ಸ್ಪರ್ಧೆ ತಳ್ಳಿ ಹಾಕಿದ್ದು, ಕುಡಚಿ ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡೋದಿಲ್ಲ ಎಲ್ಲವೂ ಊಹಾಪೋಹಗಳವೆ. ಕ್ಷೇತ್ರದಲ್ಲಿ ಸ್ಥಾನ ಖಾಲಿಲ್ಲ ಪಕ್ಷ ಯಾವ ತಿರ್ಮಾನ ತೆಗೆದುಕೊಳ್ಳುತ್ತದೆಯೋ ಅದರ ಮೇಲೆ ನಿರ್ಣಯವಾಗುತ್ತದೆ ಎಂದು ಪರೋಕ್ಷವಾಗಿ ಸ್ಪರ್ಧೆಗೆ ಅಭಿಲಾಷೆಯ ವ್ಯಕ್ತಪಡಿಸಿದರು.

ಕುಡಚಿ ವಿಧಾನಸಭಾ ಮತ ಕ್ಷೇತ್ರ ಮುಧೋಳ ಮತಕ್ಷೇತ್ರಕ್ಕೆ ಹೊಂದಿಕೊಂಡಿರುವ ಎರಡು ವಿಧಾನಸಭಾ ಕ್ಷೇತ್ರಗಳು ಕಾರಜೋಳ ಕುಟುಂಬ ಕುಡಚಿ ಕ್ಷೇತ್ರದಲ್ಲಿ ಹಿಡಿತವನ್ನು ಸಾಧಿಸಿದೆ, ಜೊತೆಗೆ ಮೀಸಲು ಕ್ಷೇತ್ರವಾಗಿದೆ ಹಾಗೂ ಕುಡಚಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಇಲ್ಲದೆ ಇರುವುದರಿಂದ ವಲಸಿಗರಿಗೆ ತೆರವಾದ ಸ್ಥಾನವನ್ನು ನೀಡುತ್ತಾರೆ ಎನ್ನಲಾಗಿದೆ.

ಆದರೆ, ಇನ್ನೂ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳು ಉಳದಿದ್ದು ಟಿಕೇಟ್ ಯಾರಿಗೆ ಘೋಷಣೆ ಮಾಡತ್ತಾರೆ ಪಿ.ರಾಜೀವ ಕುಡಚಿ ಕ್ಷೇತ್ರದಲ್ಲಿಯೇ ಉಳಿಯುತ್ತಾರಾ ಕಾಯ್ದು ನೋಡಬೇಕಿದೆ.