ಉ.ಕ ಸುದ್ದಿಜಾಲ ಮೋಳೆ :

ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷತನದಿಂದ ಸುಟ್ಟು ಕರಕಲಾದ ಕಬ್ಬಿನ ಬೆಳೆ. ಕಬ್ಬು ಬೆಳೆಗಾರರಿಗೆ ತಪ್ಪದ ಸಂಕಷ್ಟ, ಕೆಎಬಿ ನಿರ್ಲಕ್ಷ್ಯ ತನದಿಂದ ಬೆಂಕಿಗಾಹುತಿಯಾದ ಕಬ್ಬು ಬೆಳೆ‌. ಕಾಗವಾಡ ತಾಲೂಕಿನ ಮೋಳೆ ಗ್ರಾಮದ ವಿರುಪಾಕ್ಷ ಆರಿ ಅನ್ನುವವರ ಕಬ್ಬು ಬೆಂಕಿಗಾಹುತಿ.

ಕೆಎಬಿ ಸಿಬ್ಬಂಧಿಗಳಿಗೆ ಹಲಾವರು ಬಾರಿ ಮನವಿ ಮಾಡಿದರು ಡೊಂಟ್ ಕೇರ್ ಪ್ರತಿ ವರ್ಷ ಕೆಎಬಿಯಿಂದ ತೊಂದರೆ ಅನುಭವಿಸುತ್ತಿರುವ ವಿರುಪಾಕ್ಷ ಎನ್ನುವ ರೈತ. ಪ್ರತಿ ವರ್ಷ ಶಾರ್ಟ ಸರ್ಕ್ಯೂಟ್‌ನಿಂದ ತೊಂದರೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು ಗಮನ ಹರಿಸದ ಅಧಿಕಾರಿಗಳು. ಅಧಿಕಾರಿಗಳ ಬೇಜವ್ದಾರಿತನದಿಂದ ಬೇಸತ್ತ ರೈತರು.

ಜಮೀನಿನ ಮೇಲ್ಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಕಟಾವಿಗೆ ಬಂದಿದ್ದ ಕಬ್ಬು ಬೆಂಕಿಗೆ ಆಹುತಿ ಸುಮಾರು ಎರಡು ಎಕರೆಗೂ ಹೆಚ್ಚೂ ಕಬ್ಬು ಸುಟ್ಟ ಪರಿಣಾಮ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಬ್ಬಿನ ಬೆಳೆ ಸುಟ್ಟು ಕರಕಲಾಗಿದೆ. ಇದು ಒಬ್ಬಿಬ್ಬರ ರೈತರ ತೊಂದರೆ ಅಲ್ಲ ಚಿಕ್ಕೋಡಿ ಉಪವಿಭಾಗದ ಪ್ರತಿ ತಾಲೂಕಿನ ಗ್ರಾಮಗಳಲ್ಲೂ ಸಹ ರೈತರು ಪ್ರತಿದಿನ ಈ ತೊಂದರೆ ಅನುಭವಿಸುತ್ತಿದ್ದು, ಹೀಗೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಬ್ಬಿನ ಬೆಳೆಗಳು  ಶಾಟ್ ಸರ್ಕ್ಯೂಟ್ ಸುಟ್ಟು ಕರಕಲಾದರೂ ಕೂಡಾ ಯಾವುದೇ ತೆರನಾದ ಪರಿಹಾರ ಸಿಗದೇ ಇರುವುದರಿಂದ ರೈತರು‌ ಕಂಗಾಲಾಗಿದ್ದಾರೆ.