ಉ.ಕ ಸುದ್ದಿಜಾಲ ಕಿತ್ತೂರ :
ಸೋಶಿಯಲ್ ಮೀಡಿಯಾದಲ್ಲಿ ಸಂಸದರ ಆಹ್ವಾನ ಪತ್ರಿಕೆ ಹರಿಬಿಟ್ಟ ಚನ್ನಮ್ಮ ಅಭಿಮಾನಿಗಳು, ಕಿತ್ತೂರು ಕ್ಷೇತ್ರಕ್ಕೆ ಕಾಲಿಡದ ಸಂಸದರ ಧೋರಣೆ ಪ್ರಶ್ನಿಸಿ ಆಹ್ವಾನ ಲೋಕಸಭಾ ಚುನಾವಣೆಗೊಮ್ಮೆ ಮಾತ್ರ ಕಿತ್ತೂರು ಕ್ಷೇತ್ರಕ್ಕೆ ಬರುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಕಿತ್ತೂರು ಜನತೆ.
2019 – 2020ರಲ್ಲಿ ಮಳೆಯಿಂದ ಕ್ಷೇತ್ರದ ಜನ ಸಂಕಷ್ಟದಲ್ಲಿದ್ದಾಗಲೂ ಬರಲಿಲ್ಲ, ಕೊರೊನಾ ಸಂದರ್ಭದಲ್ಲಿ ಸಾವು – ನೋವು ಸಂಭವಿಸಿದರೂ ಬರಲಿಲ್ಲ, ಹಿಂದೂಗಳು ಮಾತ್ರ ನನಗೆ ಮತ ನೀಡಿ ಎಂದು ಗೆದ್ದು ಬಂದರೂ ಹಿಂದೂ ಜನ ಸಂಕಷ್ಟದಲ್ಲಿದ್ದರೂ ನೆರವಿಗೆ ಬರಲಿಲ್ಲ.
ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವರಾದರೂ ಕ್ಷೇತ್ರದ ಯುವಕರ ನಿರುದ್ಯೋಗ ಹೋಗಲಾಡಿಸಲಿಲ್ಲ, ಕ್ಷೇತ್ರದ ಜನ ಸಂಸದರ ಹುಡುಕಿಕೊಡಿ ಎಂದು ಜಾಹಿರಾತು ಹಂಚಿದರೂ ಬರಲಿಲ್ಲ.

ಈ ಉತ್ಸವಕ್ಕಾದರೂ ಹಾಜರಾಗಿ, ಜನ ನಿಮ್ಮನ್ನು ಮರೆತಿದ್ದಾರೆ ತಾವು ಕ್ಷೇತ್ರಕ್ಕೆ ಸಂಬಂಧಿಸಿದ ಸಂಸದ ಅನ್ನುವುದನ್ನ ಮತದಾರರಿಗೆ ತಿಳಿಸಿ ಎಂದು ಕಿತ್ತೂರ ರಾಣಿ ಚನ್ನಮ್ಮ ಅಭಿಮಾನಿಗಳು ಕಿತ್ತೂರು ಕ್ಷೇತ್ರ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.