ಉ.ಕ ಸುದ್ದಿಜಾಲ ರಾಯಬಾಗ :

ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿಯಾಗಿ ಬೃಹತ್ ಗಾತ್ರದ ಲಾರಿ ಚಲಾವಣೆ. ಮುಂದಿನ ಟೈರ್ ಬ್ಲಾಸ್ಟ್ ಆದ್ರೂ ಲಾರಿ ನಿಲ್ಲಿಸದೇ ಚಕ್ರದ ರಿಮ್ ಮೇಲೆ ಗಾಡಿ ಓಡಿಸಿದ ಲಾರಿ ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾದ ಬೃಹತ್ ಗಾತ್ರದ ಲಾರಿ, ಸ್ಥಳದಲ್ಲೇ ಮೃತಪಟ್ಟ ಚಾಲಕ.

ಮಹಾರಾಷ್ಟ್ರ ಮೂಲದ ಚಾಲಕ ಶೇಕ್ ಖಯಮುಂ(26) ಸ್ಥಳದಲ್ಲೇ ಸಾವು. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ‌ ಸುಟ್ಟಟ್ಟಿ ಕ್ರಾಸ್ ಬಳಿ ಘಟನೆ, ತಪ್ಪಿದ ಬಾರಿ ಅನಾಹುತ. ಬಾಗಲಕೋಟೆ ಜಿಲ್ಲೆಯ ಸಿಮೆಂಟ್ ಕಾರ್ಖಾನೆಯಿಂದ ಸಿಮೆಂಟ್ ತುಂಬಿಕೊಂಡು ಹೊರಟಿದ್ದ ಲಾರಿ.

ಗುರ್ಲಾಪುರ ಕ್ರಾಸ್ ಬಳಿ ಲಾರಿ ಮುಂದಿನ ಚಕ್ರದ ಟೈರ್ ಬ್ಲಾಸ್ಟ್. ರಿಮ್ ಮೇಲೆ ಲಾರಿ ಚಲಾಯಿಸುತ್ತ ಮುಂದೆ ಬಂದ ವಾಹನಗಳನ್ನು ಜಖಂಗೊಳಿಸಿದ ಲಾರಿ ಚಾಲಕ.

ಗುರ್ಲಾಪುರ ಕ್ರಾಸ್‌ದಿಂದ ಸುಟ್ಟಟ್ಟಿ ಕ್ರಾಸ್ ಬಳಿ ತನಕ ಟೈರ್ ಇಲ್ಲದೇ ಲಾರಿ ಚಲಾವಣೆ. ಪೊಲೀಸರು ಹಾಗೂ ಸ್ಥಳೀಯರಿಂದ ಲಾರಿ ಚೇಸ್ ಮಾಡಿ ಲಾರಿ ನಿಲ್ಲಿಸಲು ಪ್ರಯತ್ನ.

ಲಾರಿ ನಿಯಂತ್ರಣ ತಪ್ಪಿದ್ದರಿಂದ ಲಾರಿಯಿಂದ ಜಿಗಿಯಲು ಚಾಲಕನಿಂದ ಪ್ರಯತ್ನ. ಲಾರಿ ಚಾಲಕನ ಮೇಲೆಯೇ ಬಿದ್ದ ಲಾರಿ, ಚಾಲಕ ಸಾವು. ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.