ಉ.ಕ ಸುದ್ದಿಜಾಲ ಕಾಗವಾಡ :
ವಿದ್ಯುತ್ ತಂತಿಯಿಂದ ಬೇಸತ್ತ ಗ್ರಾಮಸ್ಥರು, ಸಾವನ್ನ ಕೈಯಲ್ಲಿ ಹಿಡಿದು ಜನ ಸಂಚರಿಸುವ ಪರಸ್ಥಿತಿ ನಿರ್ಮಾಣ ಏನಾದರು ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರರು ಎಂದು ಉತ್ತರ ಕರ್ನಾಟಕ ನ್ಯೂಸ್ ಪೊರ್ಟಾಲ್ ಸುದ್ದಿ ಬಿತ್ತರಿಸಿದ ಬೆನ್ನಲ್ಲೆ ಸ್ಥಳಕ್ಕೆ ಐನಾಪೂರ ಸಹಾಯಂಕ ಅಭಿಯಂತರು ಬೇಟಿ ನೀಡಿ ವಿದ್ಯುತ್ ಕಂಬ ವ್ಯವಸ್ಥೆ
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಹುದ್ದಾರ ತೋಟದ ವಸತಿಯಲ್ಲಿ ವಿದ್ಯುತ್ ಕಂಬದಿಂದ ತೊಂದರೆ ಅನುಭವಿಸುತ್ತಿದ್ದು ಮಂಗಳವಾರ ಕೆಎಬಿ ಸಿಬಂಧಿಗಳು ಬಂದು ದುರಸ್ಥೆ ಕಾರ್ಯ ಮಾಡಿದ್ದು ಹುದ್ದಾರ ತೋಟದ ವಸತಿಯ ಸಾರ್ವಜನಿಕರಿಗೆ ಅನಕೂಲ ಮಾಡಿದ್ದಾರೆ.
ಕಳೆದ ಹಲವಾರು ವರ್ಷದಿಂದ ಆಗದೇ ಇರುವ ಕಾರ್ಯವನ್ನು ಉತ್ತರ ಕರ್ನಾಟಕ ನ್ಯೂಸ್ ಪೊರ್ಟಾಲ್ ಸುದ್ದಿ ಬಿತ್ತರಿಸಿದ ಬೆನ್ನಲೆ ಒಂದು ದಿನದಲ್ಲಿ ಕೆಎಬಿ ಸಿಬ್ಬಂಧಿಗಳು ವಿದ್ಯುತ್ ಕಂಬ ಹಾಗೂ ವಾಯರ್ ದುರಸ್ತಿ ಮಾಡಿದ್ದು ಉತ್ತರ ಕರ್ನಾಟಕ ನ್ಯೂಸ್ ಪೊರ್ಟಾಲ್‌ಗೆ ಸ್ಥಳೀಯರು ಅಭಿನಂದನೆ ತಿಳಿಸಿದ್ದಾರೆ.