ಉ.ಕ ಸುದ್ದಿಜಾಲ ಹುಕ್ಕೇರಿ :
ವೈಯಕ್ತಿಕ ದ್ವೇಷದ ಹಿನ್ನೆಲೆ ವ್ಯಕ್ತಿಯೊರ್ವನ ಹತ್ಯೆ ಮಾಡಿರುವ ಆರೋಪ ಬಂದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಘಟನೆ ನಡೆದಿದೆ.
ಹೊಸೂರ ಗ್ರಾಮದ ವಿಠ್ಠಲ ಜೋತ್ಯಪ್ಪ ರಾಮಗೊನಟ್ಟಿ 60 ಕೊಲೆಯಾದ ವ್ಯಕ್ತಿ. ಕಾರ್ ಹರಿಸಿ ವಿಠ್ಠಲ ರಾಮಗೊನಟ್ಟಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನೆ.
ಸ್ಥಳಕ್ಕೆ ಯಮಕನಮರಡಿ ಪೋಲಿಸರು ಬಂದಿದ್ದು ಪೊಲೀಸ್‌ರಿಂದ ತನಿಖೆ ಮುಂದುವರೆದಿದೆ. ವಿಠ್ಠಲ ಸಾವಿನ ಬೆನ್ನಲ್ಲೆ ಮುಗಿಲು ಮುಟ್ಟಿದ ಮೃತರ ಕುಟುಂಬಸ್ಥರ ಆಕ್ರಂದನ.
ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.