ಉ.ಕ ಸುದ್ದಿಜಾಲ ಹುಕ್ಕೇರಿ :

ನಾನು ಪ್ರಯಾಗರಾಜ್‌ಗೆ ಹೋಗುವದಿಲ್ಲ, ಇಲ್ಲೆ ಇರುವ ಕೃಷ್ಣಾ, ಹೀರಣ್ಯಕೇಶಿ ನದಿಗಳಲ್ಲೆ ಸ್ನಾನ ಮಾಡುತ್ತೇನೆ ಎಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು.

ನಾನು ಪ್ರಯಾಗರಾಜ್‌ಗೆ ಹೋಗುವದಿಲ್ಲ ಸಚಿವ ಸತೀಶ ಜಾರಕಿಹೋಳಿ ಹೇಳಿಕೆ

ದಲಿತ ಸಚಿವರಿಂದ ದೆಹಲಿ ಭೇಟಿ ವಿಚಾರ ದೆಹಲಿಗೆ ಹೋಗುವ ಯಾವುದೇ ಪ್ಲಾನ್ ಇಲ್ಲ. ದೆಹಲಿಗೆ ಹೋಗುತ್ತೇವೆ ಎಂದು ನಾನು ಹೇಳಿಯೇ ಇಲ್ಲ ದೆಹಲಿಗೆ ಹೋಗುವದು ನನಗೆ ಗೊತ್ತಿಲ್ಲ ಹೋಗುವಾದದರೇ ಮೊದಲೇ ಹೇಳಿ ಹೋಗುತ್ತೇವೆ. ದಲಿತ ಸಚಿವರ ಹೋಗುವದು ಗೊತ್ತಿಲ್ಲ ಅವರು ಹೋಗುವದಾದರೇ ಹೋಗಬಹದು ಎಂದರು.

ಡಿಕೆಶಿ ಆಪ್ತ ಶಾಸಕರಿಂದ ಮುಂದಿನ ಸಿಎಂ ಡಿಕೆಶಿ ಎನ್ನುವ ಹೇಳಿಕೆ ವಿಚಾರ ಹಾಗೇ ಹೇಳಲು ಯಾವುದೇ ಕಾಯ್ದೆ ಇಲ್ಲ.‌ಡಿಕೆಶಿ ಅಭಿಮಾನಿಗಳು ಡಿಕೆಶಿ ಮುಂದಿನ ಸಿಎಂ ಎಂದು ಹೇಳುವದರಲ್ಲಿ ತಪ್ಪೇನಿಲ್ಲ ಸಿಎಂ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ ಹೈ ಕಮಾಂಡ್ ಪಾರ್ಟಿಗೆ ಡ್ಯಾಮೇಜ್ ಆಗಬಾರದಂಥ ಹೇಳಿಕೆ ನೀಡಬಾರದು ಎಂದು ಹೇಳಿದೆ.

ಡಿ ಕೆ ಶಿವಕುಮಾರ ಮಹಾಕುಂಭ ಮೇಳದಲ್ಲಿ ಭಾಗಿಯಾಗಿದ್ದಾರೆ ನೀವು ಹೋಗತೀರಾ ಎನ್ನುವ ಪ್ರಶ್ನೆ ನಾನು ಪ್ರಯಾಗರಾಜ್ ಗೆ ಹೋಗುವದಿಲ್ಲ ಇಲ್ಲೆ ಇರುವ ಕೃಷ್ಣಾ, ಹೀರಣ್ಯಕೇಶಿ ನದಿಗಳಲ್ಲೆ ಸ್ನಾನ ಮಾಡುತ್ತೇನೆ ಎಂದ ಸಚಿವ ಸತೀಶ.