ಉ.ಕ ಸುದ್ದಿಜಾಲ ಅಥಣಿ :

ಪತ್ನಿ ಮರಣ ಹೊಂದಿದ್ದಳೆಂದು ಮನನೊಂದು ಗಂಡ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ ಬಳಿಕ ವಿಜಯಪುರ ಜಿಲ್ಲೆ ಖಾಸಗಿ ಆಸ್ಪತ್ರೆಗೆ ದಾಖಲುಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಪತಿ ಸಾವನಪ್ಪಿದ್ದಾನೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಸದಾಶಿವ ರಾಮಪ್ಪ ಕಾಂಬಳೆ (೨೬) ಆತ್ಮಹತ್ಯೆ ಪ್ರಯತ್ನ ಮಾಡಿ ಚಿಕಿತ್ಸೆ ಫಲಕಾರಿಯಾಗದೆ ಸಾವು. ಶೇ 80ರಷ್ಟು ಪ್ರತಿಶತ ದೇಹ ಬೆಂಕಿಗೆ ಸುಟ್ಟು ಗಂಭೀರ ಗಾಯಗಳಾಗಿದ್ದು, ವಿಜಯಪುರ ಜಿಲ್ಲೆ ಖಾಸಗಿ ಆಸ್ಪತ್ರೆಗೆ ಸದಾಶಿವ ದಾಖಲು ಮಾಡಲಾಗಿತ್ತು.

ಸದಾಶಿವ ಮತ್ತು ರೂಪಾ

ಪತ್ನಿ ರೂಪಾ ಸದಾಶಿವ ಕಾಂಬಳೆ (೨೧) ಅನಾರೋಗ್ಯದಿಂದ ಕಳೆದ ಎರಡು ದಿನದ ಹಿಂದೆ ನಿಧನ ಹೊಂದಿದಳು. ರೂಪಾ ಮೃತ ಹಿನ್ನೆಲೆ ಸದಾಶಿವ ತೀವ್ರವಾಗಿ ಮನನೊಂದು ಆತ್ಮಹತ್ಯೆ ಯತ್ನಿಸಿದ್ದ ಚಿಕಿತ್ಸೆ ಫಲಕಾರಿಯಾಗದೆ ಸದಾಶಿವ ಕಳೆದ ರಾತ್ರಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾನೆ.

ಎರಡು ವರ್ಷದ ಹಿಂದೆ ಸಪ್ತಪದಿ ತುಳಿದ ಜೋಡಿಗಳು. ಸಾವಿನಲ್ಲೂ ಒಂದಾದ ಜೋಡಿಗಳು. ಐಗಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು.