ಉ.ಕ ಸುದ್ದಿಜಾಲ ಕಾಗವಾಡ :
ಪ್ರಜಾಧ್ವನಿ- 2 ಚುನಾವಣೆ ಪ್ರಚಾರ ಸಭೆಯಲ್ಲಿ ಲಕ್ಷ್ಮಣ ಸವದಿ ಭಾಷಣ. ಉಗಾರ್ ಖುರ್ದ್ ಪಟ್ಟಣದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶ. ಚುನಾವಣೆ ಪೂರ್ವ ಸಿದ್ದರಾಮಯ್ಯ ಭರವಸೆ ನೀಡಿದ್ದರು ನುಡಿದಂತೆ ನಡೆದಿರುವ ಸರ್ಕಾರ ಯಾವುದಾದರು ಇದ್ದರೆ ಅದು ಸಿದ್ದರಾಮಯ್ಯ ಎಂದು ಸಿದ್ದರಾಮಯ್ಯ ಅವರನ್ನ ಕೊಂಡಾಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಇಗಾರ ಪಟ್ಟಣದಲ್ಲಿ ಚಿಕ್ಕೋಡಿ ಲೋಕಸಭಾ ಅಭ್ಯರ್ಥಿ ಪ್ರಿಯಂಕಾ ಜಾರಕಿಹೋಳಿ ಪ್ರಚಾರ ಹಾಗೂ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ನಿಮ್ಮ ಹತ್ತಿರ ಮತ ಪಡೆಯಲಿಕ್ಕೆ ನಮ್ಮಗೆ ಹಕ್ಕಿದೆ. ಆದರೆ, ಬಿಜೆಪಿಯವರು ನಿಮ್ಮ ಹತ್ತಿರ ಬಂದು ಮತ ಪಡೆಯುವ ನೈತಿಕತೆಯ ಇಲ್ಲ.
ಬಿಜೆಇಯವರು ನುಡಿದಂತೆ ನಡೆಯುತ್ತದೆ ಎನ್ನುತ್ತಾರೆ ನದಿಯ ಜೊಡನೆಯ ಕಾರ್ಯ ಯಾವುದಾದರೂ ರಾಜ್ಯದಲ್ಲಿ ಆಗಿದೆಯಾ ಅಂತಾ ಬಿಜೆಪಿಯವರನ್ನ ಕೇಳಬೇಕ. ರೈತರ ಆದಾಯ ದ್ವಿಗುಣ ಮಾಡತ್ತಿನಿ ಅಂತಾ ಹೇಳಿದರು ಆದರೆ ಆಗಿದೆಯೆ? ಏನ ಹೆಚ್ಚಿಗೆ ಆಗಿದೆ ಅಂದರೆ ರಸಗೊಬ್ಬರ ಬೆಲೆ ಡಬ್ಬಲ ಆಗಿದೆ
ಸೊಲಿಬೆಲೆ ವಿರುದ್ದ ಹರಿಹಾಯದ್ದ ಲಕ್ಷ್ಮಣ ಸವದಿ
ಸೂಲಿಬೆಲೆ ನೀರಿನೊಳಗೆ ಬೆಂಕಿ ಹಚ್ಚುವ ಕೆಲಸ ಮಾಡತ್ತಾನೆ. ಸೊಲಿಬೆಲೆ ಹೇಳತ್ತಾರೆ ಬ್ಲ್ಯಾಕ್ ಮನಿ ತಂದು ನಮ್ಮ ದೇಶದ ರಸ್ತೆಗಳಿಗೆ ಬಂಗಾರ ತಗಡ ಬಡಿಬಹುದಂತೆ ರೈತರ ಖಾತೆಗೆ ಹಣ ಹಾಕತ್ತೀವಿ ಅಂತಾ ಹೇಳಿದ್ದರು ಅದರೆ ಯಾರಿಗಾದರು ಬಂದಿದ್ದಾವಾ?
ಇನ್ನೊಂದು ಮುಖ್ಯವಾಗಿ ದೇಶದಲ್ಲಿ ಬುಲೆಟ್ ಟ್ರೇನ್ ಬರುತ್ತಂತ ಹೇಳಿದರು ಎಲ್ಲಿ ಬಂತು? ಬಾಗಲಕೋಟೆ – ಕುಡಚಿ ಟ್ರೇನ್ ಸಂಚಾರವಾಗಿದೆಯಾ ಕಳೆದ ಹತ್ತು ವರ್ಷಗಳಿಂದ ಪೂಜೆ ಮಾತ್ರ ಆಗಿದೆ ಚಿಕ್ಕೋಡಿ ಲೋಕಸಭಾ ವ್ಯಪ್ತಿಯಲ್ಲಿ ಬರುವ ಎಲ್ಲ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರಿಗೂ ಚಿಕ್ಕೋಡಿಯಿಂದ ಸ್ಪರ್ಧೆ ಮಾಡಲು ಕೇಳಿದ್ದೆವು.
ಆದರೆ ಯಾರು ಸ್ಪರ್ಧೆಗೆ ನಿಲ್ಲದ ಹಿನ್ನಲೆಯಲ್ಲಿ ಸತೀಶ ಜಾರಕಿಹೋಳಿ ಪುತ್ರಿ ಪ್ರಿಯಂಕಾ ಜಾರಕಿಹೋಳಿ ಅವರು ಸ್ಪರ್ಧೆ ಮಾಡಿದ್ದಾರೆ. ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿಗೆ ಮತ ನೀಡಿ ಎಂದು ಸಮಾವೇಶ ಉದ್ದೇಶಿಸಿ ಲಕ್ಷ್ಮಣ ಸವದಿ ಭಾಷಣ