ಉ.ಕ ಸುದ್ದಿಜಾಲ ಅಥಣಿ :
ಚಿಕ್ಕಪ್ಪ ಚಲಾಯಿಸುತ್ತಿದ್ದ ಟ್ರಾಕ್ಟರ್ ಗೆ ಅಣ್ಣನ ಮಗ ಸಿಲುಕಿ ಸಾವನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೇವರಟ್ಟಿ ಗ್ರಾಮದಲ್ಲಿ ನಡೆದಿದೆ.
ತೆವರಟ್ಟಿ ಗ್ರಾಮದ ಸುದರ್ಶನ ಹಣಮಂತ ನೀಲಜಗಿ (7) ಸಾವನಪ್ಪಿರುವ ಬಾಲಕ. ಟ್ರಾಕ್ಟರ್ ನಲ್ಲಿ ಶಾಲೆಗೆ ಡ್ರಾಪ್ ಕೊಟ್ಟು ಹೋಗುವಾಗ ದುರಂತ ನಡೆದಿದೆ. ಟ್ರಾಕ್ಟರ್ ನಿಂದ ಇಳಿದು ಶಾಲೆಗೆ ಹೊಗುವಾಗ ಟ್ರಾಕ್ಟರ್ ಟ್ರೈಲರ್ಗೆ ಬ್ಯಾಗ್ ತಗುಲಿ ಅಪಘಾತ ಸಂಭವಿಸಿದೆ.
ಬ್ಯಾಗ್ ತಗುಲಿ ಹಿನ್ನೆಲೆ ಚಕ್ರಕ್ಕೆ ವಿದ್ಯಾರ್ಥಿ ಬಿದ್ದು ಸ್ಥಳದಲ್ಲೇ ಸಾವು. ಆಕಸ್ಮಿಕವಾಗಿ ನಡೆದ ಘಟನೆಯಿಂದಾಗಿ ಕುಟುಂಬದಲ್ಲಿ ಆಕ್ರಂದನ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.