ಉ.ಕ ಸುದ್ದಿಜಾಲ ವಿಜಯಪುರ :
ಕಳೆದ 2022ರ ಶಿವರಾತ್ರಿಯ ದಿನ ನುಡಿದಿದ್ದ ಭವಿಷ್ಯ ವರ್ಷದೊಳಗೆ ಸತ್ಯವಾಗಿದ್ದು, ಮತ್ತೆ ನಿಜವಾಯ್ತು ವಿಜಯಪುರ ಜಿಲ್ಲೆಯ ಬಬಲಾದಿ ಕಾಲಜ್ಞಾನ. ಟರ್ಕಿ, ಸಿರಿಯಾದಲ್ಲಿ ಭಯಾನಕ ಭೂಕಂಪನ, ನರಕ ಸೃಷ್ಟಿ. ಈ ಬಗ್ಗೆ ಭವಿಷ್ಯ ನುಡಿದಿದ್ದ ಕಾಲಜ್ಞಾನದ ಮಠದ ಸಿದ್ದು ಮುತ್ಯಾ, ಬಬಲಾದಿ ಸದಾಶಿವ ಮಠದ ಪೀಠಾಧಿಪತಿ.
ಭೂಕಾಂತಿ ನಡುಗಿತು. ಉತ್ತರಕ್ಕೆ ಮುರುಕವಿದಿತು ಎಂದು ಸ್ಪೋಟಕ ಭವಿಷ್ಯ ನುಡಿದಿದ್ದ ಬಬಲಾದಿ ಮಠ. ಜಗತ್ತಿನಲ್ಲಿ ಪಾಪ ಹೆಚ್ಚಾಗಿ ಕಲಿಪುರುಷನ ಆಟ ಬಹಳ ಕೆಟ್ಟ ಇದೆ ಎಂದು ಭವಿಷ್ಯ ನುಡಿದಿದ್ದ ಬಬಲಾದಿ ಮಠ. ಶಿವರಾತ್ರಿಯಂದು ನುಡಿದ ಭವಿಷ್ಯ ಮತ್ತೊಂದು ಶಿವರಾತ್ರಿಯೊಳಗೆ ಸತ್ಯವಾಗುತ್ತೆ ಎನ್ನುವ ನಂಬಿಕೆ..
ಪಾಪಿ ಪಾಕಿಸ್ತಾನದ ಬಗ್ಗೆ ನುಡಿದಿದ್ದ ಭವಿಷ್ಯ ಸತ್ಯವಾಯ್ತು. ಪಡುವಣ ದಿಕ್ಕಿಗೆ ತ್ರಾಸ ಇದೆ ಎಂದು ಭವಿಷ್ಯ ಹೇಳಿದ್ದ ಬಬಲಾದಿ ಮಠದ ಕಾಲಜ್ಞಾನ. ಸೃಷ್ಟಿ ಮುಂದ ದುಃಖ, ನಷ್ಟ.. ಲೋಕಕ್ಕೆ ಬಹಳ ಕಷ್ಟ ಎಂದು ನುಡಿಯಲಾಗಿದ್ದ ಕಾಲಜ್ಞಾನದ ಕಾರ್ಣಿಕ. ಅಂತೆಯೇ ಪಾಪಿ ಪಾಕಿಸ್ತಾನದಲ್ಲಿ ಶುರುವಾಗಿರುವ ಅನ್ನಕ್ಕೆ ಹಾಹಾಕಾರ.
ತಿನ್ನಲು ಗೋಧಿಯು ಸಿಗದೆ ಪರಿತಪಿಸುತ್ತಿರುವ ಪಾಕಿಸ್ತಾನ. ಪಾಕಿಸ್ತಾನದಲ್ಲಿ ಶುರುವಾಗಿರುವ ಅನ್ನಕ್ಕಾಗಿ ಹಾಹಾಕಾರ. ಈ ಮೂಲಕ ಬಬಲಾದಿ ಮಠದಲ್ಲಿ ನುಡಿದ ಕಾಲಜ್ಞಾನ ಮತ್ತೆ ಸತ್ಯ ಶಿವರಾತ್ರಿಯ ಮೂರನೇ ದಿನ ನಡೆಯುವ ಜಾತ್ರೆಯಲ್ಲಿ ಮತ್ತೆ ಕಾಲಜ್ಞಾನ ನುಡಿಯಾಗಲಿದೆ. ಫೆ.20 ರಂದು ಮತ್ತೆ ಕಾಲಜ್ಞಾನ ನುಡಿ, ಭಕ್ತರಲ್ಲಿ ಕಾತುರ.