ಉ.ಕ ಸುದ್ದಿಜಾಲ ಬೆಳಗಾವಿ :

ಮತ್ತೆ ಬೆಳಗಾವಿಯಲ್ಲಿ ಮುಂದುವರೆದ ಮರಾಠಿ‌ ಭಾಷಿಕರ ಓಲೈಕೆ ರಾಜಕಾರಣ, ಮತ್ತೆ ಮರಾಠಿ ಭಾಷಿಕರಿಗೆ ಒಲಿದ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ -ಉಪಮೇಯರ್ ಹುದ್ದೆ, ಶಾಸಕ ಅಭಯ್ ಪಾಟೀಲ್, ರಾಜ್ಯ ಬಿಜೆಪಿ ವಕ್ತಾರ್ ಎಂಬಿ ಜಿರಲಿ ಜಂಟಿ ಘೋಷಣೆ.

ಮೇಯರ್ ಸ್ಥಾನಕ್ಕೆ ಶೋಭಾ ಸೋಮನಾಚೆ, ಉಪಮೇಯರ್ ಸ್ಥಾನಕ್ಮೆ ರೇಷ್ಮಾ ಪಾಟೀಲ್ ನಾಮಪತ್ರ ಸಲ್ಲಿಕೆ, ಬಿಜೆಪಿಯಿಂದ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಏಕೈಕ ನಾಮಪತ್ರ ಸಲ್ಲಿಕೆ. ವಾರ್ಡ್ ನಂ.57ರ ಸದಸ್ಯೆ ಶೋಭಾ ಸೋಮನಾಚೆ, ವಾರ್ಡ್ ನಂ.33ರ ಸದಸ್ಯೆ ರೇಷ್ಮಾ ಪಾಟೀಲ್, ಇಬ್ಬರೂ ಅವಿರೋಧ ಆಯ್ಕೆಯಾಗಲ್ಲಿದ್ದು, ಬೇರೆ ಯಾರು ನಾಮಪತ್ರ ಸಲ್ಲಿಸಿಲ್ಲ.

ಮೊದಲ ಬಾರಿಗೆ ಪಕ್ಷದ ಅಡಿಯಲ್ಲಿ ಮಹಾನಗರ ಪಾಲಿಕೆಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿತ್ತು. ಕಳೆದ ಹದಿನಾರು ತಿಂಗಳಿನಿಂದ ನ್ಯಾಯಾಂಗ ಬಿಕ್ಕಟ್ಟು ಹಿನ್ನಲೆಯಲ್ಲಿ ಸಧ್ಯ ಚುನಾವಣೆ ನಡೆಯುತ್ತಿದೆ. ಕೊನೆಗೂ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ.

ಆಡಳಿತ ಪಕ್ಷದ ನಾಯಕರನ್ನಾಗಿ ರಾಜಶೇಕರ್ ಡೋಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ವಕೀಲ ಎಂ.ಬಿ ಜಿರಲಿ ಹೇಳಿದರು. ಕನ್ನಡಿಗರ ಕಡೆಗಣಿಸಿ ಮರಾಠಿ ಭಾಷಿಕರಿಗೆ ಮಣೆ ಹಾಕಿದ್ದಕ್ಕೆ ಶಾಸಕ ಅಭಯ್ ಪಾಟೀಲ್ ಸ್ಪಷ್ಟನೆ. ಭಾಷೆವಾರು ಚುನಾವಣೆಗಿಂತ ಅಭಿವೃದ್ಧಿಪರ ಚಿಂತನೆಗೆ ಒತ್ತು ಕೊಟ್ಟಿದ್ದೇವೆ.