ಉ.ಕ ಸುದ್ದಿಜಾಲ‌ ನಿಪ್ಪಾಣಿ :

110 ವರ್ಷಗಳ ಇತಿಹಾಸವುಳ್ಳ ಮಂದಿರವನ್ನು ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಪತ್ರಗಳನ್ನು ಅನಾಮದೇಯ ವ್ಯಕ್ತಿ ಇಟ್ಟು ಹೋಗಿಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಮಂತ್ರಿ ಅಮೀತ ಷಾಗೆ ನಿಪ್ಪಾಣಿ ಶಾಸಕಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಪತ್ರ ಬರೆದಿದ್ದಾರೆ.

ಅಲ್ಲಾ ಹು ಅಕ್ಬರ್ ಎಂಬ ತಲೆಬರಹದಡಿ ಅನಾಮದೇಯ ಪತ್ರಗಳ ಪ್ರಕರಣ ನಿಪ್ಪಾಣಿಯ ರಾಮಮಂದಿರದಲ್ಲಿ ಎರಡು ಪತ್ರಗಳನ್ನು ಇಡಲಾಗಿತ್ತು.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ರಾಮ ಮಂದಿರ. ಪತ್ರದಲ್ಲಿ ಕರ್ನಾಟಕದ ಹಿಂದೂ ದೇವಾಲಯಗಳಿಗೆ ರಕ್ಷಣೆ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತ ಪಡಿಸೊದ ಶಶಿಕಲಾ ಜೊಲ್ಲೆ.

ನಿಪ್ಪಾಣಿಯ ರಾಮ ಮಂದಿರದ ಬೆದರಿಕೆ ಪತ್ರಗಳ ಪ್ರಕರಣ ಗಂಭೀರತೆ ಕುರಿತು ಕೇಂದ್ರದ ಗಮನಕ್ಕೆ ತಂದ ಶಶಿಕಲಾ ಜೊಲ್ಲೆ. ಬೆದರಿಕೆ ಪತ್ರ ಬರೆದಿಟ್ಟ ವ್ಯಕ್ತಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂದು ಉಲ್ಲೇಖಿಸಿ ಅಮೀತ ಷಾಗೆ ಪತ್ರ ಬರೆದ ಶಶಿಕಲಾ ಜೊಲ್ಲೆ.