ಉ.ಕ ಸುದ್ದಿಜಾಲ ಗದಗ :

ಆನ್ ಲೈನ್ ಗೇಮ್ ಗಳಿಗೆ ದುಡಿದ ಹಣವನ್ನ ಹೂಡಿಕೆ ಮಾಡಿ ಆಟವಾಡ್ತಾರೆ.‌ ಆಟದಲ್ಲಿ ಹಣ ಕಳೆದುಕೊಳ್ಳುತ್ತಿದ್ದಾರೆ. ಗದಗನಲ್ಲಿ ಆನ್ ಲೈನ್ ಗೇಮ್ ಗೆ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ.

ಅಧಿವೇಶನದಲ್ಲಿ ಶಾಸಕರು ಚರ್ಚಿಸಿ ಆನ್ ಲೈನ್ ಗೇಮ್ ಬ್ಯಾನ್ ಮಾಡಿಸಬೇಕು ಅಂತ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ..

ಗದಗ ನಗರದ ವಿಶ್ವ ಹೊಟೇಲ್ ದಲ್ಲಿ ಆನ್ಲೈನ್ ಗೇಮ್ ನಿಂದ ಹಣ ಕಳೆದುಕೊಂಡ ಜಗದೀಶ್ ಹಳೇಮನಿ ಎಂಬಾತ ಮನನೊಂದು ಪ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನವೆಂಬರ್ 30 ರ ರಾತ್ರಿ ಗದಗ ನಗರದ ವಿಶ್ವ ಹೊಟೆಲ್ ನಲ್ಲಿ ಜಗದೀಶ್ ಹಳೇಮನಿ ರೂಮ್ ಮಾಡಿಕೊಂಡಿದ್ದ, ಬೆಳಗ್ಗೆ ಯಿಂದ ಕುಟುಂಬಸ್ಥರ ಫೋನ್ ಮಾಡಿದ್ರು ಜಗದೀಶ್ ಫೋನ್ ಫೀಕ್ ಮಾಡಿಲ್ಲವಂತೆ.

ಹೀಗಾಗಿ ಕುಟುಂಬಸ್ಥರಿಗೆ ಆತಂಕ ಸೃಷ್ಟಿಯಾಗಿದೆ. ಪೊಲೀಸರ ಮೂಲಕ ಜಗದೀಶ್ ವಿಶ್ವ ಹೊಟೇಲ್ ನಲ್ಲಿ ರೂಮ್ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೊಟೇಲ್ ಗೆ ಹೋಗಿ ನೋಡಿದ್ದಾಗ ಜಗದೀಶ್ ಪ್ಯಾನ್ ಗೆ ನೇಣು ಹಾಕಿಕೊಂಡಿದ್ದಾನೆ.

ಜಗದೀಶ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಸಹ ಬರೆದು ಇಟ್ಟಿದ್ದಾನೆ, ಡೆತ್ ನೋಟ್ ನಲ್ಲಿ ಆನ್ ಲೈನ್ ಗೇಮ್ ನಿಂದ ಸಾಕಷ್ಟು ಹಣ ಕಳೆದುಕೊಂಡಿದೇನೆ. ಸರ್ಕಾರ ಆನ್ ಲೈನ್ ಗೇಮ್ ಬ್ಯಾನ್ ಮಾಡಬೇಕು.

ಅಧಿವೇಶನದಲ್ಲಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಆನ್ ಲೈನ್ ಗೇಮ್ ಬ್ಯಾನ್ ಬಗ್ಗೆ ಚರ್ಚೆ ನಡಿಸಬೇಕು ಅಂತ ಒತ್ತಾಯಿಸಿದ್ದಾನೆ. ಆನ್ ಲೈನ್ ಗೇಮ್ ಬಹಳಷ್ಟು ಯುವಕರು ಹಾಳಾಗುತ್ತಿದ್ದಾರೆ.

ಹೀಗಾಗಿ ಸರ್ಕಾರ ಆನ್ ಲೈನ್ ಗೇಮ್ ಬ್ಯಾನ್ ಮಾಡಲು ಕ್ರಮ ಕೈಗೊಳ್ಳಬೇಕೆಂದು ಡೆತ್ ನೋಟ್ ನಲ್ಲಿ ಬರದಿದ್ದಾನೆಂದು ಕುಟುಂಬಸ್ಥರು ಹೇಳಿದ್ದಾರೆ. ಜಗದೀಶ್ ನಿಗೆ ಮದುವೆಯಾಗಿ ಏಳು ವರ್ಷ ಕಳೆದಿದೆ.

ಇಬ್ಬರು ಮಕ್ಕಳು ಇದ್ದಾರೆ. ಆನ್ ಲೈನ್ ಗೇಮ್ ಗೆ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾನೆ. ಜಗದೀಶ್ ನ ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ..