ಉ.ಕ ಸುದ್ದಿಜಾಲ ರಾಯಬಾಗ :

ವಾಟ್ಸ್ ಆ್ಯಪ್ ಸ್ಟೇಟಸ್‌ಗೆ ಪ್ರೇಯಸಿ ಫೋಟೋ ಹಾಕಿದ್ದ ಯುವಕ. ಈ ಮನ್ಮಥನ ಸ್ಟೇಟಸ್ ನೋಡಿ ಯುವತಿ ಪ್ರಾಣವೇ ಬಿಟ್ಟಿದ್ದಾಳೆ. ಈ ಯುವತಿ ಹೆಸರು ಆರತಿ ಪ್ರಶಾಂತ ಕಾಂಬಳೆ. 26 ವರ್ಷ ವಯಸ್ಸು. ಆರತಿಗೆ ಮದುವೆ ಆಗಿದ್ದರೂ ಇನ್ನೊಬ್ಬನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ್ ಗ್ರಾಮದಲ್ಲಿ ಆರತಿ ಮದುವೆಯಾಗಿ ಸಂಸಾರ ಮಾಡುತ್ತಿದ್ದರು. ವಾಟ್ಸ್‌ಆ್ಯಪ್ ಸ್ಟೇಟಸ್ ಫೋಟೋ ವೈರಲ್ ಆದ ಹಿನ್ನೆಲೆಯಲ್ಲಿ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದ ಸಂಬಂಧಿಕರ ಮನೆಗೆ ಬಂದು ಸಾವನ್ನಪ್ಪಿದ್ದಾರೆ.

ಆರತಿ ಜೊತೆ ಸ್ನೇಹ ಬೆಳೆಸಿದ್ದ ಸಾಗರ ಕಾಂಬಳೆ ತನ್ನ ವಾಟ್ಸ್ಆ್ಯಪ್ ಸ್ಟೇಟಸ್‌ನಲ್ಲಿ ಪ್ರೇಯಸಿ ಫೋಟೋ ಹಾಕಿದ್ದಾನೆ. ಸಾಗರ ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ಆರತಿ ಫೋಟೋ ಹಾಕಿದ್ದು ಫುಲ್ಲ್ ವೈರಲ್ ಆಗಿತ್ತು. ಅಕ್ರಮ ಸಂಬಂಧ ಬಯಲಾದ ಹಿನ್ನೆಲೆ ಮನನೊಂದು ಆರತಿ ಇಂದು ಪ್ರಾಣವೇ ಕಳೆದುಕೊಂಡಿದ್ದಾರೆ.

ಸ್ಥಳಕ್ಕೆ ರಾಯಬಾಗ ಪೋಲಿಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ. ಈ ಕುರಿತು ರಾಯಬಾಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.