ಉ.ಕ ಸುದ್ದಿಜಾಲ ಅಥಣಿ :

ಚಿಕ್ಕನಿಂತ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅನಂತಪೂರ ಗ್ರಾಮದ ಬಳಿ ಶನಿವಾರ ರಾತ್ರಿ ನಡೆದಿದೆ.

ಅನಂತಪೂರ ಗ್ರಾಮದ ಅಥಣಿ ಮುಖ್ಯ ರಸ್ತೆ ಬಸ್ ಸ್ಟಾಪ್ ಹತ್ತಿರ ಈ ಘಟನೆ ನಡೆದಿದ್ದು, ರಸ್ತೆ ಪಕ್ಕ ನಿಂತ ಗೂಡ್ಸ್ ಲಾರಿಗೆ  ವೇಗದಿಂದ ಬಂದ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನುಚ್ಚುಗುಜ್ಜಾಗಿ ಸವಾರ ಸ್ಥಳದಲ್ಲಿ ಸಾವನಪ್ಪಿದ್ದಾನೆ.

ರೋಹಿತ ಗಣಪತಿ ಕಾಂಬಳೆ (22) ಮೃತ ದುರ್ದೈವಿ. ಮೃತನನ್ನು ಅಥಣಿ ತಾಲೂಕಿನ ಮದಗಾವಿ ಗ್ರಾಮದವನು ಎನ್ನಲಾಗ್ತಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.