ಮಂಡ್ಯ :

ಮೂವತೈದು ವರ್ಷಗಳ ಸುದೀರ್ಘ ಪ್ರೀತಿ ಮಾಡಿದ್ದ ಜೋಡಿ ತನ್ನ 65 ನೇ ವಯಸ್ಸಿನಲ್ಲಿ ಮದುವೆಯಾಗಿ ಆ ಲವ್ ಸಕ್ಸಸ್ ಆಗುವಂತೆ ಮಾಡಿದ್ದಾರೆ. ಮೇಲುಕೋಟೆ ಚೆಲುವರಾಯಸ್ವಾಮಿ ಮನೆ ದೇವರಾಗಿದ್ದು, ಅಲ್ಲಿಯೇ ವಿವಾಹವಾಗಲು ನಿರ್ಧರಿಸಿದ್ದು, ಅದರಂತೆ ಇಂದು ಶ್ರೀನಿವಾಸನ್ ನರಸಿಂಹನ್ ಗುರೂಜಿ ನೇತೃತ್ವದಲ್ಲಿ ಕೆಲ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.

ಈ ವಧುವರರು ಮೂಲತಃ ಹೊಳೆನರಸೀಪುರ ಕಡೆಯವರು. 65 ವರ್ಷ ವಯಸ್ಸಿನ ಚಿಕ್ಕಣ್ಣ, 58 ವರ್ಷ ವಯಸ್ಸಿನ ಜಯಮ್ಮ ಅಂತ. ಚಿಕ್ಕಣ್ಣರಿಗೆ ಜಯಮ್ಮ ಅತ್ತೆ ಮಗಳು. 35 ವರ್ಷಗಳ ಹಿಂದೆಯೆ ಅವರಿಬ್ಬರೂ ಪರಸ್ಪರ ಪ್ರೀತಿ ಮಾಡಲಾರಂಭಿಸಿದ್ದರು. ಆದ್ರೆ ಕೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಚಿಕ್ಕಣ್ಣನಿಗೆ ಆಕೆಯನ್ನು ಕೊಟ್ಟು ಮದುವೆ ಮಾಡಿಕೊಡದೆ ಮೈಸೂರಿನ ಬೇರೊಬ್ಬನ ಜೊತೆ ಮದುವೆಯನ್ನೂ ಮಾಡಿದ್ದರು. ಅವರಿಗೆ ಒಬ್ಬ ಮಗ ಕೂಡ ಆಕೆಗೆ ಇದ್ದು, ಮೂರ್ನಾಲ್ಕು ವರ್ಷದಿಂದ ಮನಸ್ತಾಪಗೊಂಡು ಗಂಡನಿಂದ ದೂರವಿದ್ದಾರೆ.‌ ಆದ್ರೆ ಇದುವರೆಗು ಮದುವೆಯಾಗದೆ ಉಳಿದಿದ್ದ ಚಿಕ್ಕಣ್ಣ ಹೇಗೋ ಜೀವನ ನಡೆಸ್ತಿದ್ದ. ಇದೀಗ ಗಂಡನ ಮನಸ್ತಾಪದಿಂದ ನೊಂದಿದ್ದ ಜಯಮ್ಮ ತನಗಾಗಿ ಕಾದಿರುವ ಚಿಕ್ಕಣ್ಣನ ಜೊತೆ ಕೊನೆ ಕಾಲದಲ್ಲಿಯಾದ್ರು ಬದುಕೋಣ ಎಂದು ನಿರ್ಧರಿಸಿ ಮದುವೆ ಆಗಿದ್ದಾರೆ.