ಉ.ಕ ಸುದ್ದಿಜಾಲ ಚಿಕ್ಕೋಡಿ :

ಯಮಸಲ್ಲೇಖನ ವೃತ ಸ್ವೀಕರಿಸಿ ಜೈನಮುನಿ ಪ ಪೂ ೧೦೮ ಸಮಾಧಿ ಭೂಷಣ ಮುನಿಮಹಾರಾಜರು ಜಿನೈಕ್ಯರಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಪ್ಪನವಾಡಿ ಗ್ರಾಮದಲ್ಲಿ ಜೈನ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ಪೂರ್ಣಗೊಂಡಿವೆ.

ಕಳೆದ ಹಲವು ದಿನಗಳಿಂದ ಯಮಸಲ್ಲೇಖನ ವೃತ ಸ್ವೀಕರಿಸಿದ್ದ ಪ ಪೂ ೧೦೮ ಸಮಾಧಿ ಭೂಷಣ ಮುನಿಮಹಾರಾಜರು ನಿನ್ನೆ ರಾತ್ರಿ ಜಿನೈಕ್ಯರಾಗಿದ್ದಾರೆ.

ಯಮಸಲ್ಲೇಖರ ವೃತ ಸ್ವೀಕರಿಸಿ ನಿನ್ನೆ ಜೀನೈಕ್ಯರಾಗಿದ್ದ ಸಮಾಧಿ ಭೂಷಣ ಮುನಿ ಮಹಾರಾಜರ ಅಂತಿಮ ವಿಧಿವಿಧಾನಗಳು ದೇಶಭೂಷನ ಮುನಿ ಮಹಾರಾಜರ ಆಶ್ರಮದಲ್ಲಿ ನಡೆದವು.

ಮುನಿಗಳ ಅಂತ್ಯ ಸಂಸ್ಕಾರದಲ್ಲಿ ಅಪಾರ ಭಕ್ತ ಸಮೂಹ ಆಗಮಿಸಿತ್ತು. ಕರ್ನಾಟಕ ಮಹಾರಾಷ್ಟ್ರ ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಆಗಮಿಸಿದ ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರು.