ಉ.ಕ ಸುದ್ದಿಜಾಲ ಅಥಣಿ :

ಕಾಂಗ್ರೆಸ್ ಪಕ್ಷದ ತಾಯಿ ಬಂಜೆಯಾಗಿದೆ. ಇಲ್ಲಿ ಮಕ್ಕಳು ಹುಟ್ಟು ಪ್ರಶ್ನೆ ಉದ್ಭವವಾಗುದಿಲ್ಲ ಮತ್ತೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ನವರರು ಹಗಲು ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಡಿ.ಕೆ ಶಿವಕುಮಾರಗೆಸಿ ಟಾಂಗ್ ನೀಡಿದ್ದಾರೆ.

ಗಾವಿ ಜಿಲ್ಲೆಯ ಅಥಣಿ‌ ತಾಲೂಕಿನಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಮಹೇಶ ಕುಮಟಳ್ಳಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಗುದ್ದಲಿ ಪೂಜೆ ನೆರವೆರಿಸೊದ ಬಳಿಕ ಮಾಧ್ಯಮದವರ ಜೊತೆ ಲಕ್ಷ್ಮಣ ಸವದಿ ಮಾತನಾಡಿ ಮುಂಬರುವ ದಿನದಲ್ಲಿ ಬಿಜೆಪಿ ಸರ್ಕಾರ ಉರುಳುತ್ತದೆ ಎಂದು ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಅಥಣಿಯಲ್ಲಿ ಲಕ್ಷ್ಮಣ ಸವದಿ ಡಿ.ಕೆ ಶಿವಕುಮಾರ್‌ಗೆ ತಿರುಗೇಟು ನೀಡಿದ್ದಾರೆ.

ನಮ್ಮ ನಾಯಕರು ಹೇಳುತ್ತಿದ್ದರು. ಕಾಂಗ್ರೆಸ್ ನವರು ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಸುತಿದ್ದಾರೆ ಎಂದು.  ನಮ್ಮ ನಾಯಕರಿಗೆ ಹೇಳುತ್ತೇನೆ, ಕಾಂಗ್ರೆಸ್ ಪಕ್ಷದ ತಾಯಿ ಬಂಜೇಯಾಗಿದೆ. ಇಲ್ಲಿ ಕೂಸು ಹುಟ್ಟುವ ಪ್ರಶ್ನೆ ಇಲ್ಲ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಲಕ್ಷ್ಮಣ ಸವದಿ ಈಗಾಗಲೇ ಬಾಲಚಂದ್ರ ಜಾರಕಿಹೊಳಿ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಆ ಎರಡು ಹೇಳಿಕೆ ನೀವು ಗಮನಿಸಿರಬಹುದು. ರಮೇಶ್ ಜಾರಕಿಹೊಳಿ ಡಿ.ಕೆ ಶಿವಕುಮಾರ್ ವ್ಯಯಕ್ತಿಕ ವಿವಾದ.

ಈ ವಿಚಾರಗಳು ಬಿಜೆಪಿ ಪಕ್ಷಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧಿಸಿಲ್ಲ ಎಂದರು. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದು ಸರಿಯಲ್ಲ, ಸಿಡಿ ಪ್ರಕರಣ ಸಿಬಿಐ ತನಿಖೆಗೆ ಒತ್ತಾಯ ವಿಚಾರ, ಸಿಬಿಐ ತನಿಖೆ ಬಗ್ಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ.