ಮೋಳೆ (ಕಾಗವಾಡ) :

ಬಿಜೆಪಿ ಯುವ ಮುಖಂಡ ಸಂಜಯ ತೇಲಸಂಗ ಅವರ ತಾಯಿ  ಕಾಶೀಬಾಯಿ ಹಣಮಂತ ತೇಲಸಂಗ (78) ರವಿವಾರ ಬೆಳಿಗ್ಗೆ 11.30 ಕ್ಕೆ ವಯೋಸಹಜ ಕಾರಣದಿಂದ ಮರಣ ಹೊಂದಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ತಮ್ಮ ಸ್ವ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಾಯಂಕಾಲ 4 ಗಂಟೆಯವರೆಗೆ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೋಳೆ – ಕೌಲಗುಡ್ಡ ರಸ್ತೆ ಮಧ್ಯದಲ್ಲಿರುವ ತೇಲಸಂಗ ತೋಟದಲ್ಲಿ ಅಂತ್ಯ ಕ್ರಿಯೆಗೆ ವ್ಯವಸ್ಥೆ ಮಾಡಲಾಗಿದೆ.