ಉ.ಕ ಸುದ್ದಿಜಾಲ ಬೆಳಗಾವಿ :
ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆ ಮುಕ್ತಾಯಗೊಂಡಿದ್ದು ಮೇ 25 ರಿಂದ ಜುಲೈ 20ರವರೆಗೆ (55 ದಿನಗಳಲ್ಲಿ) ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ಹಾಕಿದ್ದ ಕಾಣಿಕೆ ಕೋಟಿಗಳಲ್ಲಿ ಸಂಗ್ರಹವಾಗಿದೆ.
ಒಟ್ಟು 1,48,95,404 ಕಾಣಿಕೆ ಸಂಗ್ರಹವಾಗಿದ್ದು ಈ ಪೈಕಿ 1.35 ಕೋಟಿ ಹಣ, 11.79 ಲಕ್ಷ ಮೌಲ್ಯದ ಚಿನ್ನಾಭರಣ, 1.80 ಲಕ್ಷ ಮೌಲ್ಯದ ಬೆಳ್ಳಿ ಸಂಗ್ರಹವಾಗಿದೆ.
ದಾಖಲೆ ಮೊತ್ತದ ಕಾಣಿಕೆ ಸಂಗ್ರಹಕ್ಕೆ ಶಾಸಕ ವಿಶ್ವಾಸ ವೈದ್ಯ ಸಂತಸ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿಯಲ್ಲಿ ಈ ಬಾರಿ ದಾಖಲೆ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.