ಉ.ಕ ಸುದ್ದಿಜಾಲ ಬೆಳಗಾವಿ :
ಸಾಮಾಜಿಕ ಜಾಲತಾಣದಲ್ಲಿ ಬ್ಯಾಡ್ ಕಮೆಂಟ್ ವಿಚಾರ.
ಬೆಳಗಾವಿಯಲ್ಲಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ ಹೇಳಿಕೆ. ಬೆಳಗಾವಿಯಲ್ಲಿ ಸಾಮಾಜಿಕ ಸ್ವಾಸ್ಥ್ಯ ಹದಗೆಡಿಸುವವರಿಗೆ ಎಚ್ಚರಿಕೆ ನೀಡಿದ ಕಮಿಷನರ್. ನಗರ ಸಿಟಿ ವ್ಯಾಪ್ತಿಯಲ್ಲಿ ನಾವೆಲ್ಲರೂ ಒಂದಾಗಿದ್ದೇವೆ, ಜೊತೆಗಿದ್ದಿವಿ. ಬೇರೆ ಧರ್ಮ,ಜಾತಿ ಅವರ ಮೇಲೆ ಕೆಟ್ಟ ಮೇಸೆಜ್ ಹಾಕತ್ತಾ ಇದ್ದಾರೆ.
ಆದರೆ ನಾವು ಬೇರೆ ಬೇರೆ ಜಾತಿ ಆಗಿದ್ದರೂ ಕೂಡಾ ಎಲ್ಲರೂ ಒಂದೆ ಇದ್ದೇವೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಕೆಲ ಜನರು ಕೆಟ್ಟ ಕೆಟ್ಟ ಮೇಸೆಜ್ ಹಾಕತ್ತಾ ಇದ್ದಾರೆ. ಬೇರೆ ಜಾತಿ,ಧರ್ಮದ ಮೇಲೆ ಮೇಸೆಜ್ ಹಾಕತ್ತಾ ಇದ್ದಾರೆ. ನಾವು ಸುಮ್ಮನೆ ಬಿಡಲ್ಲಾ ಅವರ ಮೇಲೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುತ್ತೇವೆ .
ಆ ರೀತಿ ಯಾರೇ ಕೆಟ್ಟ್ ಪೊಸ್ಟ್ ಮೇಸೆಜ್ ಮಾಡಿದರೆ ನೀವು ಪೊಲೀಸ್ ಗಮನಕ್ಕೆ ತರಬಹುದು ಹಾಗೇ 112 ಗೆ ಕಾಲ್ ಮಾಡಿ ಕೆಂಪ್ಲೇಟ್ ಮಾಡಬಹುದು. ಎಲ್ಲಿ ಬೇಕಲ್ಲಿ ಗುಂಪು ಗುಂಪಾಗಿ ನಿಲ್ಲಬಾರದು ಅವರ ಮೇಲೂ ಕೂಡಾ ಕ್ರಮ ಕೈಗೊಳ್ಳಬೇಕಾಗುತ್ತದೆ. ಯಾರೂ ಕೂಡಾ ಶಾಂತಿ ಕದಡುವ ಕೆಲಸ ಮಾಡಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ ಪೊಲೀಸ್ ಕಮಿಷನರ್.
ವಿಡಿಯೋ : ಬೆಳಗಾವಿಯಲ್ಲಿ ಸಾಮಾಜಿಕ ಸ್ವಾಸ್ಥ್ಯ ಹದಗೆಡಿಸುವವರಿಗೆ ಎಚ್ಚರಿಕೆ ನೀಡಿದ ಕಮಿಷನರ್
