ಉ.ಕ ಸುದ್ದಿಜಾಲ ಬೆಳಗಾವಿ :

ಕರವೇ 25 ವಸಂತಗಳನ್ನು ಪೂರೈಸಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಡಿ.3-4 ರಂದು ಇಪ್ಪತೈದು ವರ್ಷ ದಾಟಿದ ಬೆಳ್ಳಿಹಬ್ಬ ಕಾರ್ಯಕ್ರಮ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಬೆಳ್ಳಿಹಬ್ಬದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮದವರಿಗೆ ಆಗಮಿಸಿದ ಅವರು, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ನಡೆಯುವ ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಈ ವರ್ಷ ಬೆಳಗಾವಿಯಲ್ಲಿ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಣೆ. ಬೆಳಗಾವಿಯ ಎಲ್ಲ ಕನ್ನಡಿಗರಿಗೆ ಅಭಿನಂದನೆ ಸಲ್ಲಿಸಿದ ನಾರಾಯಣಗೌಡ.

ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ಅನೇಕ ಭಾಗಗಳಿಂದ ಮಠಾಧೀಶರು, ಸಾಹಿತಿಗಳು ಭಾಗವಹಿಸಲಿದ್ದಾರೆ. ಉತ್ತರ ಕರ್ನಾಟಕದ ಬೆಳಗಾವಿ ಹಾಗೂ ಕಲ್ಯಾಣ ಕರ್ನಾಟಕದ ಕಲಬುರ್ಗಿಯಲ್ಲಿ ಬೆಳ್ಳಿ ಹಬ್ಬದ ಕಾರ್ಯಕ್ರಮ ಆಚರಣೆಗೆ ಕೇಂದ್ರ ಸಮಿತಿ ತೀರ್ಮಾನ ಮಾಡಿದೆ.

ಬೆಳ್ಳಿಹಬ್ಬ ಕರ್ನಾಟಕದ ಅನೇಕ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು. 25 ಗಡಿ ಭಾಗದ ಕನ್ನಡ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ತೀರ್ಮಾನ.

ಬೆಳಗಾವಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ನಾರಾಯಣಗೌಡ ಬರಲ್ಲ ಏಕೆ? ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಲ್ಲಿ ಒಂದು ಭಾಷೆ ಕಾಟ ಆದ್ರೆ ಬೆಂಗಳೂರಲ್ಲಿ ನೂರಾರು ಭಾಷೆಗಳ ಸಮಸ್ಯೆ ಕಾಟ. ಜಿಲ್ಲಾ ಸಮಿತಿ ಕಾರ್ಯಕ್ರಮ ಆಯೋಜನೆಗೆ ಕರೆ ಕೊಟ್ರೆ ಬರುತ್ತೇನೆ. ರಾಜ್ಯದ ಎಲ್ಲಾ ಭಾಗದಲ್ಲಿ ಹೆಚ್ಚಿನ ರೀತಿಯಲ್ಲಿ ಕಾರ್ಯಕರ್ತರು ಭಾಗಿಯಾಗಬೇಕು.

ಎಲ್ಲ ಕಡೆ ಕಾರ್ಯಕ್ರಮ ಆಯೋಜನೆ ಮಾಡುವುದು ಕರವೇ ತಾಕತ್ತು. ಬೆಂಗಳೂರು ಕಾರ್ಯಕ್ರಮ ನಂತರ ಒಂದೊಂದು ತಿಂಗಳ ಅಂತರದಲ್ಲಿ ಬೆಳಗಾವಿ, ಕಲುಬುರ್ಗಿಯಲ್ಲಿ ಕಾರ್ಯಕ್ರಮ. ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಸಚಿವ  ಸೋಮಶೇಖರ ಹಾಗೂ ಸುನೀಲ್ ಕುಮಾರ್ ಜೊತೆ ಚರ್ಚೆ ಮಾಡಿದ್ದೇನೆ.

ಕರ್ನಾಟಕದ ಗಡಿ ಭಾಗದ ಜಿಲ್ಲೆಗಳಲ್ಲಿ ಸರ್ಕಾರ ಹೆಚ್ಚಿನ ಅನುದಾನ ಕೊಡಬೇಕು. ಬೆಳಗಾವಿ ರಾಜ್ಯೋತ್ಸವದಲ್ಲಿ ಸಮಯ ನಿಗದಿ ಪೋಲಿಸರು ಲಾಠಿ ತೆಗೆದುಕೊಂಡು ರಾತ್ರಿ 9 ಗಂಟೆಗೆ ಸಮಯ ನಿಗದಿ ಮಾಡಿದ್ದಾರೆ. ಸೂಕ್ಷ್ಮ ಪ್ರದೇಶ ಎಂಬ ಕಾರಣ ಇರಬಹುದು ಸ್ಥಳೀಯ ನಾಯಕರು ವಿಚಾರಿಸಬೇಕು ಎಂದ ನಾರಾಯಣಗೌಡ್ರು.

ಸಮಯ ನಿಗದಿ ವಿಚಾರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡುತ್ತೇನೆ. ಸರ್ಕಾರಗಳು ಸಂಘ ಸಂಸ್ಥೆಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿಲ್ಲ. ಕನ್ನಡಿಗರ ಸಡಗರ ಸಂಭ್ರಮಕ್ಕೆ ಯಾರು ಅಡ್ಡಿ ಮಾಡಬಾರದು. ಲಾಠಿ ಚಾರ್ಜ್ ಆಗಿರುವುದು ಖಂಡನೀಯ ಅದನ್ನು ಖಂಡಿಸುತ್ತೇನೆ. ಕನ್ನಡಿಗರನ್ನು ಹತ್ತಿಕ್ಕುವ ಕೆಲಸ ಸರಿಯಿಲ್ಲ ಗೃಹ ಸಚಿವರ ಜೊತೆ ಮಾತನಾಡುತ್ತೇನೆ.

ಕರ್ನಾಟಕ ಮಹಾರಾಷ್ಟ್ರ ರಾಜ್ಯಪಾಲರ ಸಭೆ ಚರ್ಚೆ ವಿಚಾರ
ಕರ್ನಾಟಕದ ಬಸ್ ಮೇಲೆ ಮರಾಠಿ ಭಾಷೆಯ ಬೋರ್ಡ್ ಗಳಿವೆ ಮಹಾರಾಷ್ಟ್ರ ಬಸ್ ಗಳ ಮೇಲೆ ಇರಲ್ಲ. ರಾಜಕಾರಿಣಿಗಳು ರಣಹೇಡಿಗಳು ಅವರ ವಿರುದ್ಧವಾಗಿ ನಿರಂತರ ಪ್ರತಿಭಟನೆ ಮಾಡಿದ್ದೇವೆ. ಇಬ್ಬರ ರಾಜ್ಯಪಾಲರ ಸಭೆ ಚರ್ಚೆ ವಿಚಾರ ಗಮನಕ್ಕೆ ಬಂದಿದೆ. ಸರ್ಕಾರ ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತದೆ ನೋಡೋಣ.

ನಾರಾಯಣಗೌಡರು ರಾಜಕೀಯ ಬರುತ್ತಾರಾ?
ಇವತ್ತಿನ ರಾಜಕಾರಣ ಹೇಗಿದೆ ಎಂಬುವುದು ಗೊತ್ತಿದೆ.
ಸಜ್ಜನರು ರಾಜಕಾರಣ ಮಾಡಲು ಆಗುವುದಿಲ್ಲ. ಬಾರಿ ಪ್ರಭಾವಿಗಳು ಹಣವಂತರ ರಾಜಕಾರಣ ಆಗಿದೆ. 20-30 ಕೋಟಿ ಹಣಬೇಕು ಶ್ರೀಮಂತರ ರಾಜಕಾರಣ. ನಾನು ಸದ್ಯಕ್ಕೆ ರಾಜಕಾರಣ ವಿಚಾರ ಮಾಡಿಲ್ಲ. ಮೂರು ಪಕ್ಷದಲ್ಲಿ ಆಹ್ವಾನ ಇದೆ.

ಮುಂದಿನ ದಿನಗಳಲ್ಲಿ ಯಾವುದೇ ಕರವೇ ಹೆಸರಿನಲ್ಲಿ ಬಣಗಳು ಇರುವುದಿಲ್ಲ. ಅದರ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಪತ್ರ ಕೊಟ್ಟು ಮನವಿ ಮಾಡಲಾಗಿದೆ ಎಂದರು.