ಉ.ಕ ಸುದ್ದಿಜಾಲ ನಿಪ್ಪಾಣಿ :
ಸರ್ಕಾರ ನಿಷೇದ ನಡುವೆಯೂ ಕಸಾಯಿಖಾನೆಯಲ್ಲಿ ಕೂಡಿ ಹಾಕಲಾಗಿದ್ದ 28 ಹಸುಗಳನ್ನು ರಕ್ಷಿಸಿ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿರುವ ಘಟನೆ ನಿಪ್ಪಾಣಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ನಿಪ್ಪಾಣಿ ಪಟ್ಟಣದ ದರ್ಗಾಗಲ್ಲಿ ಸಮೀಪದ ಕೊಟ್ಟಿಗೆಯಲ್ಲಿ 28 ಹಸುಗಳನ್ನು ಕಟ್ಟಿಹಾಕಲಾಗಿತ್ತು. ಗೋರಕ್ಷಕರ ಖಚಿತ ಮಾಹಿತಿ ಮೇರೆಗೆ ನಿಪ್ಪಾಣಿ ಶಹರ ಪೊಲೀಸ್ ಠಾಣೆಯ ಪೊಲೀಸರು ದಾಳಿ ಮಾಡಿ ಹಸುಗಳನ್ನು ರಕ್ಷಿಸಿದ್ದಾರೆ.
ಎತ್ತುಗಳು, ಕರು ಸೇರಿ 28 ಹಸುಗಳನ್ನು ರಕ್ಷಿಸಲಾಗಿದೆ. ಅದರಲ್ಲಿ 1 ಹಸು ಮೃತಪಟ್ಟಿದೆ. ರಕ್ಷಿಸಲಾದ ಹಸುಗಳನ್ನು ನಿಪ್ಪಾಣಿ ಸಮಾಧಿ ಮಠದ ಗೋ ಶಾಲೆಗೆ ಕಳುಹಿಸಲಾಗಿದೆ.