ಉ.ಕ ಸುದ್ದಿಜಾಲ ಯಾದಗಿರಿ :
ರೈತನ ಪ್ರೀತಿಗೆ ಇಲ್ಲೊಂದು ಮನಕುಲಕುವ ಘಟನಗೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ತಿರುಪತಿ ಎನ್ನುವ ರೈತನೆ ಸಾಕ್ಷಿ
ತನ್ನ ಮಕ್ಕಳಂತೆ ತನ್ನ ಎರಡು ಜೋಡೆತ್ತುಗಳನ್ನು ಅತಿ ಹೆಚ್ಚಾಗಿ ಪ್ರೀತಿಸುತ್ತಿದ್ದ ರೈತ ಬೆಳಂ ಬೆಳಿಗ್ಗೆ ಬೆಲೆಬಾಳುವ ಎತ್ತುಗಳು ಕಾಣದೇ ಆಗಿರುವದನ್ನ ಕಂಡು ರೈತ ಕಂಗಾಲಾಗಿದ್ದು ಎತ್ತುಗಳನ್ನ ಕಳೆದುಕೊಂಡು ಕಣ್ಣೀರು ಹಾಕಿ ನನ್ನ ಎತ್ತುಗಳು ಕಳೆದು ಹೋಗಿವೆ ಎಂದು ಅಂಗಲಾಚಿ ಕೆಳಗೆ ಕುಳಿತು ಎತ್ತುಗಳನ್ನ ನೆನೆದ ರೈತ ಕಣ್ಣೀರಾಕ್ಕಿದ್ದಾನೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ತಿರುಪತಿ ಎನ್ನುವ ರೈತನಿಗೆ ಸೇರಿದ ಜೋಡೆತ್ತುಗಳನ್ನು ಯಾರೋ ಕಿಡಗೇಡಿಗಳು ಕಳವು ಮಾಡಿದ್ದಾರೆ. ಆದರೆ, ರೈತನ ಪ್ರೀತಿ ವಿಶ್ವಾಸ ಬೆಳೆಸಿದ ಜೋಡೆತ್ತುಗಳು ಕಳ್ಳರಿಂದ ತಪ್ಪಿಸಿಕೊಂಡು ಪುನಃ ರೈತನ ಕೊಟ್ಟಿಗೆಗೆ ಬಂದಿದ್ದು ರೈತನ ಹಾಗೂ ಎತ್ತುಗಳ ಪ್ರೀತಿ ಇಲ್ಲಿ ಸಾಭಿತಾಗಿದೆ.
ಸುಮಾರು 1.50 ಲಕ್ಷ ಬೆಲೆ ಬಾಳುವ ಜೋಡೆತ್ತುಗಳನ್ನು ರಾತ್ರೋ ರಾತ್ರಿ ಕಳ್ಳರು ಕೊಟ್ಟಿಗೆಯಿಂದ ಬಿಚ್ಚಿಕೊಂಡು ಎಸ್ಕೇಪ್ ಆಗಿದ್ರು. ಬೆಳಂ ಬೆಳಿಗ್ಗೆ ಬೆಲೆಬಾಳುವ ಎತ್ತುಗಳು ಕಾಣದೇ ಇರುವದನ್ನ ಕಂಡು ದಿಗ್ಭ್ರಾಂತನಾದ ರೈತ ನೆಲದಲ್ಲಿ ಉಳ್ಳಾಡಿ ಗೋಳಾಡಿದ್ದಾನೆ. ಅದನ್ನು ಕಂಡ ಗ್ರಾಮಸ್ಥರು ಮಮ್ಮಲ ಮರಗಿದ್ದಾರೆ.
ಆದರೆ, ವಿಚಿತ್ರ ವೆಂಬಂತೆ ಕಳೆದುಹೋಗಿದ್ದ ಜೋಡೆತ್ತುಗಳು ಕಳ್ಳರ ಕೈಯಿಂದ ತಪ್ಪಿಸಿಕೊಂಡು ಮರಳಿ ರೈತನನ್ನ ಹುಡುಕಿಕೊಂಡು ಮರಳಿದ ಘಟನೆ ಅಪರೂಪವಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ನಡೆದಿದೆ. ಸಗರ ಗ್ರಾಮದ ತಿರುಪತಿ ಎನ್ನುವ ರೈತನಿಗೆ ಸೇರಿದ ಜೋಡೆತ್ತುಗಳೇ ವಿಶಿಷ್ಠ ಘಟನೆಗೆ ಸಾಕ್ಷಿಯಾಗಿದ್ದಾವೆ.
ಸಗರ ಗ್ರಾಮದ ರೈತ ತಿರುಪತಿ ಮಾತನಾಡಿ, ಮರಳಿ ಜೋಡೆತ್ತುಗಳು ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾನೆ. ಒಟ್ಟಾರೆ ಜೋಡೆತ್ತುಗಳ ಕಳ್ಳತನ ಪ್ರಕರಣವು ಮರಳಿ ಅನ್ನದಾತನ ಬಳಿಗೆ ಬರುವುದರ ಮೂಲಕ ಸುಖಾಂತ್ಯವಾಗಿದ್ದು, ರೈತನಿಗೆ ಎತ್ತಿನ ಮೇಲಿದ್ದ ಪ್ರೀತಿ ಹಾಗೂ ಕಳ್ಳರಿಂದ ತಪ್ಪಿಸಿಕೊಂಡು ಮರಳಿ ಅನ್ನದಾತನತ್ತ ಬಂದಿರುವ ಜೋಡೆತ್ತುಗಳು.