ಉ.ಕ ಸುದ್ದಿಜಾಲ ಅಥಣಿ :
ಅಥಣಿಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ. ಆಪರೇಷನ್ ಹಸ್ತ ಮಾಡುವರು ಮೂರ್ಖರು ಹೋಗುವರು ಮೂರ್ಖರು. ನಾವು ಆಪರೇಷನ್ ಬಿಜೆಪಿ ಮುಖಾಂತರ ಹೋಗಲಿಲ್ಲ ಕಾಂಗ್ರೆಸ್ ಸರ್ಕಾರ ವಿರುದ್ಧ ಬೇಸರಗೊಂಡು ನಾವು ಬಿಜೆಪಿಗೆ ಹೋಗಿದ್ದೇವೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಗೋಕಾಕ ಶಾಸಕ ರಮೇಶ ಜಾರಕಿಹೋಳಿ ಕಾಂಗ್ರೆಸ್ ನಲ್ಲಿ 25 ಹಿರಿಯ ಶಾಸಕರು ಬಂಡಾಯ ಎಳುವರಿದ್ದರು. 25 ಹಿರಿಯ ಶಾಸಕರು ಸಾಂಗ್ರೀಲಾ ಹೋಟೆಲ್ನಲ್ಲಿ ಸೇರುವರಿದ್ದರು.
ಇದನ್ನು ಮರೆಮಾಚಲು ಮಹನಾಯಕ ನಾಟಕ ಮಾಡಿದ್ದಾನೆ. ಕಾಂಗ್ರೆಸ್ ಶಾಸಕರು ದೊಡ್ಡ ಪ್ರಮಾಣದ ಪತ್ರ ಬರೆದಿದ್ದಾರೆ. ಇದನ್ನು ಮರೆಮಾಚಲು ಮತ್ತು ಅವರನ್ನು ಹೆದರಿಸಲು ಕಾಂಗ್ರೆಸ್ ಹಸ್ತ ನಾಟಕ್ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟ ರಮೇಶ್ ಜಾರಕಿಹೊಳಿ. ಸಿಎಂ ಸಿದ್ದರಾಮಯ್ಯನ್ನು ಸದ್ಯಕ್ಕೆ ನೋಡಕ್ಕೆ ಆಗುತಿಲ್ಲ. 2013 ಸರ್ಕಾರ ಸಿದ್ದರಾಮಯ್ಯ ಇವತ್ತು ಕಾಣುತ್ತಿಲ್ಲ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರೀ ಹ್ಯಾಂಡ್ ಇಲ್ಲ. ಅವರ ಮುಖದಲ್ಲಿ ಖುಷಿ ಕಾಣುತ್ತಿಲ್ಲ.
ಚಿಕ್ಕೋಡಿ ಭಾಗದಲ್ಲಿ ಬರಗಾಲ ಪ್ರದೇಶ ಘೋಷಣೆ ವಿಚಾರ. ಸಿಎಂ ರಾಜ್ಯದ ಬಗ್ಗೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಆಸೆ ಇದೆ. ಕಾದು ನೋಡುನು, ಅವತ್ತಿನ ಸಿಎಂ ಇವತ್ತು ಇಲ್ಲ. ಅವರ ಜೊತೆ ನಾನು ಮಂತ್ರಿಯಾಗಿ ಕೆಲಸವನ್ನು ಮಾಡಿದ್ದೇನೆ. ಸಿಎಂ ಸಿದ್ದರಾಮಯ್ಯ ಗೌರವ ಇದೆ. ಅವರ ಮುಖದ ಮೇಲೆ ಖುಷಿ ಕಾಣುತ್ತಿಲ್ಲ ಎಂದರು.