ಉ.ಕ ಸುದ್ದಿಜಾಲ ಬೈಲಹೊಂಗಲ :
ರಸ್ತೆ ಕಾಮಗಾರಿ ವೇಳೆ ರೋಡ್‌ರೊಲರ್ ಹರಿದು ಸೂಪರ್‌ವೈಸರ್ ಧಾರುಣ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ. ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ ರೋಡ್ ರೋಲರ್ ಹಿಂಬದಿಗೆ ಚಲಿಸಿ ಅವಘಡ.
ಬಸವನಬಾಗೇವಾಡಿ ಮೂಲದ ಪಾಂಡುರಂಗ ಮಧುಸೂದನ್ (52) ಸಾವು. ಅಶೋಕ ಕಂಪನಿಯ ಸೂಪರ್‌ವೈಸರ್ ಆಗಿ ಕೆಲಸ ಮಾಡ್ತಿದ್ದ ಮೃತ ಪಾಂಡುರಂಗ. ಹಿರೇಬಾಗೇವಾಡಿಯಿಂದ ಸವದತ್ತಿವರೆಗೆ ನಡೆದಿದ್ದ ರಾಜ್ಯ ಹೆದ್ದಾರಿ ಕಾಮಗಾರಿ. ಇಳಿಜಾರಿನಲ್ಲಿ ನಿಲ್ಲಿಸಲಾಗಿದ್ದ ರೋಡ್ ರೋಲರ್ ಏಕಾಏಕಿ ಹಿಂಬದಿಗೆ ಚಲಿಸಿದ್ದಕ್ಕೆ ಅವಘಡ.
ರೊಲರ್ ಹರಿದ ಪರಿಣಾಮ ವ್ಯಕ್ತಿಯ ತಲೆ ಸಂಪೂರ್ಣ ಛಿದ್ರ ಛಿದ್ರ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ, ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
