ಉ.ಕ ಸುದ್ದಿಜಾಲ ವಿಜಯಪುರ :
ಪೈನಾನ್ಸ್ ಮಾಡ್ತಿದ್ದ ವ್ಯಕ್ತಿಯ ಭೀಕರ ಹತ್ಯೆ ನಡೆದಿರುವ ಘಟನೆ ವಿಜಯಪುರ ನಗರದ ಜುಮ್ಮಾ ಮಸೀದಿ ಹಿಂಭಾಗ ನಡೆದಿದೆ. ಶರಣಬಸಪ್ಪ ಜೇವರ್ಗಿ (45) ಕೊಲೆಯಾದ ವ್ಯಕ್ತಿ. ವಿಜಯಪುರ ನಗರದ ಶಾಪೇಟೆಯಲ್ಲಿ ಪೈನಾನ್ಸ್ ಕೆಲಸ ಮಾಡ್ತಿದ್ದ ಶರಣಬಸಪ್ಪ..
ಬೈಕ್ ಮೇಲೆ ಬಂದು ತಲೆಗೆ ಕೊಡಲಿಯಿಂದ ಹೊಡೆದು ಕೊಲೆ ಮಾಡಲಾಗಿ್ಎ. ಪೈನಾನ್ಸ್ ವಸೂಲಿಗೆ ಹೋದಾಗ ಹತ್ಯೆ. ಜುಮ್ಮಾಮಸೀದಿ ಹಿಂಭಾಗದ ಮುಬಾರಕ್ ಮಸೀದಿ ಎದುರು ಹತ್ಯೆ. ಸ್ಕೂಟಿ ಮೇಲೆ ಹೊರಟಿದ್ದಾಗಲೇ ಹಿಂಬದಿಯಿಂದ ದಾಳಿ ಇಬ್ಬರು ಮುಸುಕುಧಾರಿಗಳಿಂದ ದಾಳಿ, ಸ್ಥಳದಲ್ಲೆ ಹತ್ಯೆ
ಕೊಡಲಿಯ ಹೊಡೆತಕ್ಕೆ ತಲೆಯ ಮೇಲಿನ ತಲೆಗೆ ಬಲವಾದ ಗಾಯ, ತಲೆ ಸೀಳಿದ ಪರಿಣಾಮ ಸ್ಥಳದಲ್ಲೆ ಶರಣಬಸಪ್ಪ ಸಾವನಪ್ಪಿದ್ದಾನೆ. 10 ತಿಂಗಳ ಹಿಂದೆಯೂ ಇದೆ ಜಾಗದಲ್ಲಿ ಶರಣಬಸಪ್ಪ ಮೇಲೆ ಅಟ್ಯಾಕ್ ನಡೆದಿತ್ತು. ಅದೃಷ್ಟವಶಾತ್ ಬದುಕುಳಿದಿದ್ದ ಶರಣಬಸಪ್ಪ
ಬೈಕ್ ಮೇಲೆ ಬಂದು ರಾಡ್ ನಿಂದ ಹಲ್ಲೆ ಮಾಡಿ ಓಡಿ ಹೋಗಿದ್ದ ಮುಸುಕುಧಾರಿ ನಿನ್ನೆ ಮತ್ತೆ ಅದೇ ಜಾಗದಲ್ಲಿ ಮಾರಕಾಸ್ತ್ರದಿಂದ ದಾಳಿ. 10 ತಿಂಗಳ ಹಿಂದೆ ನಡೆದಿದ್ದ ಅಟ್ಯಾಕ್ ಕುರಿತು ಗೋಳಗುಮ್ಮಟ ಪೊಲೀಸರಿಗೆ ಮಾಹಿತಿ ನೀಡಿದ್ದ ಕುಟುಂಬಸ್ಥರು
ಇದಾದ ಬಳಿಕವೂ ಮತ್ತೊಮ್ಮೆ ದಾಳಿ ಮಾಡಿ ಭೀಕರ ಹತ್ಯೆ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
