ಉ.ಕ ಸುದ್ದಿಜಾಲ ಮಂಡ್ಯ :

ಮಂಡ್ಯದಲ್ಲಿ‌ ಬೆಚ್ಚಿ ಬೀಳಿಸುವ ಕೊಲೆ. ದರೋಡೆ ಮಾಡಲು ಬಂದವನಿಂದ ನಡೆಯಿತು ಬರ್ಬರ ಹತ್ಯೆ. ಒಂಟಿ ಮನೆಯಲ್ಲಿ ನಡೆಯಿತು ಭೀಕರ ಕೃತ್ಯ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ ಗ್ರಾಮದ ತೋಟದ ಮನೆಯಲ್ಲಿ ಘಟನೆ. ರಮೇಶ್ ಕೊಲೆಯಾದ ದುರ್ದೈವಿ. ನಿನ್ನೆ ಸಂಜೆ 7 ಗಂಟೆ ವೇಳೆಗೆ ತೋಟದ ಮನೆಗೆ ಬಂದ ಅನಾಮಧೇಯ.

ಈ ವೇಳೆ ರಮೇಶ್ ಪತ್ನಿ ಯಶೋದಮ್ಮರನ್ನು ಮಾತನಾಡಿಸಿದ ಅಪರಿಚಿತ. ನಿಮ್ಮ ಮನೆಗೆ ಮರ ಕತ್ತರಿಸುವ ಯಂತ್ರ ಬಂದಿದೆ. ನಿಮ್ಮ ಮನೆಯವರೆ ಆರ್ಡರ್ ಮಾಡಿದಾರೆ ತಗೋಳಿ‌ ಎಂದ ಅನಾಮಧೇಯ.

ಬಳಿಕ ನಾವು ಯಾರು ಆರ್ಡರ್ ಮಾಡಿಲ್ಲ ಎಂದ ಯಶೋಧಮ್ಮ. ಈ ವೇಳೆ ಯಂತ್ರವನ್ನು ಆನ್ ಮಾಡಿ ಯಶೋಧಮ್ಮ ಕುತ್ತಿಗೆಗೆ ಹಿಡಿದ ಅಪರಿಚಿತ. ಬಳಿಕ ಪ್ರಜ್ಞೆತಪ್ಪಿ ಕೆಳಗೆ ಬಿದ್ದ ಯಶೋಧಮ್ಮ. ನಂತರ ಮನೆಯ ಒಳಗೆ ನುಗ್ಗಿದ ಕೀಚಕ.

ಈ ವೇಳೆ ಮಲಗಿದ್ದ ರಮೇಶ್‌ಗೆ ಈ ಮೊದಲೇ ಸ್ಟ್ರೋಕ್ ಹೊಡೆದಿತ್ತು. ಆಗ ಮರ ಕತ್ತರಿಸುವ ಯಂತ್ರ ಆನ್ ಮಾಡಿ ರಮೇಶ್ ಕುತ್ತಿಗೆಗೆ ಹಿಡಿದ ಕೊಲೆಗಡುಕ. ಈ ಮೂಲಕ ರಮೇಶ್‌ನನ್ನು ಬರ್ಬರವಾಗಿ ಕೊಲೆ ಗೈದ ಕಟುಕ.

ಆಗ ಎಚ್ಚರಗೊಂಡು ಬಾಗಿಲು ಹಾಕಿ‌ ಲಾಕ್ ಮಾಡಿದ ಯಶೋಧಮ್ಮ. ಬಳಿಕ ಸ್ಥಳೀಯರನ್ನು ಕೂಗಿ ಕರೆದ ಯಶೋಧಮ್ಮ. ನಂತರ ಸ್ಥಳಕ್ಕೆ ಬಂದ ಸ್ಥಳೀಯರು. ಈ‌ ವೇಳೆ ಮನೆಯ ಒಳಭಾಗದಲ್ಲಿ ಇದ್ದ ಕೀಚಕ.

ಬಳಿಕ ಪೊಲೀಸರಿಗೆ ಸ್ಥಳೀಯರು ಮಾಹಿತಿ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.