ಉ.ಕ‌ ಸುದ್ದಿಜಾಲ ಬಾಗಲಕೋಟೆ :

ಕ್ರೂಸರ್ ವಾಹನದ ಚಾಲಕನ ಅಚಾತುರ್ಯ, ರಸ್ತೆ ಬದಿಯ ಬೋರ್ವೆಲ್‌ಗೆ ಡಿಕ್ಕಿ ಹೊಡದು ಪಲ್ಟಿಯಾದ ಕ್ರೂಸರ್ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಶಿರಗುಪ್ಪಿ ಗ್ರಾಮದ ಹೊಸ ಪ್ಲಾಟ್ ಹತ್ತಿರ ಅಪಘಾತ ನಡೆದಿದೆ.

ಕಾತರಕಿ ಗ್ರಾಮದ ವಾಹನ ಹಾಗೂ ಯುವಕರು ಸೇರಿ ಕ್ರೂಸರ್ ನಲ್ಲಿದ್ದ 16 ಜನ ಯುವಕರು ಚಾಲಕ ಸೇರಿದಂತೆ ಮೂವರಿಗೆ ಗಂಭೀರ ಗಾಯ, ಯಲ್ಲಪ್ಪ ಭೂಸನ್ನವರ ಕ್ರೂಸರ್ ಚಾಲಕ ಕಂ ಮಾಲೀಕ ಸಣ್ಣಪುಟ್ಟ ಗಾಯಗೊಂಡವರಿಗೆ ಕುಂದರಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ. ಗಂಭೀರವಾಗಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ರವಾನೆ‌ ಮಾಡಲಾಗಿದೆ.

ಕುಂದರಗಿ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟ ಆರು ಗ್ರಾಮ ಪಂಚಾಯತಿ ಒಳಗೊಂಡ ಗ್ರಾಮಗಳ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕ್ರೀಡಾಕೂಟ ಮುಗಿಸಿಕೊಂಡು ಮರಳಿ ಊರಿಗೆ ತೆರಳುವಾಗ ಈ ಘಟನೆ ನಡೆದಿದೆ. ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.