ಉ.ಕ ಸುದ್ದಿಜಾಲ
ನಮ್ಮದು ಸಂಪ್ರದಾಯ, ಸಂಸ್ಕ್ರತಿಯ ನೆಲೆಬೀಡು, ಅನೇಕ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಕೆಲ ಧಾರ್ಮಿಕ ಕಾರ್ಯಕ್ರಮಗಳು ಇಂದಿಗೂ ಚಾಲ್ತಿಯಲ್ಲಿವೆ ಅವುಗಳಲ್ಲಿ ಜೋಕುಮಾರ ಸ್ವಾಮಿ ಹಬ್ಬ ಕೂಡಾ ಒಂದು. ಗಂಗಾಂಬಿಕಾ ಮತಸ್ಥರ ಮನೆತನದ ಆರಾಧ್ಯ ದೈವನಾಗಿರುವ ಜೋಕುಮಾರ ಸ್ವಾಮಿಯನ್ನು ಏಳು ದಿನಗಳ ಕಾಲ ಪೂಜಿಸಿ, 11ನೇ ದಿನದ ಗಣೇಶ ವಿಸರ್ಜನೆಯ ಮರುದಿನ ವಿದಾಯ ಹೇಳುವ ವಿಶಿಷ್ಟ ಆಚರಣೆ ಉತ್ತರ ಕರ್ನಾಟಕದಲ್ಲಿದೆ.
ಚಿಕ್ಕೋಡಿ ಉಪವಿಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಕೂಡಾ ಈ ಪರಂಪರೆ ಚಾಲ್ತಿಯಲ್ಲಿದ್ದು, ಭಾದ್ರಪದ ಅಷ್ಟಮಿಯಂದು ಜೋಕುಮಾರನ ಮೂರ್ತಿಯನ್ನು ಮಣ್ಣಿನಿಂದ ತಯಾರಿಸಿ ಹುಣ್ಣಿಮೆಯವರೆಗೆ ಪೂಜೆ ಮಾಡಲಾಗುತ್ತದೆ. ಜೋಕುಮಾರನ ಮಣ್ಣಿನ ಮೂರ್ತಿಯನ್ನು ಬುಟ್ಟಿಯಲ್ಲಿ ಬೇವಿನ ಸೊಪ್ಪಿನ ನಡುವೆ ಕುಳ್ಳಿರಿಸಲಾಗುತ್ತದೆ. ಗಂಗಾಬಿಕ ಮನೆತನದ ಮಹಿಳೆಯರು ಆ ಬುಟ್ಟಿಯನ್ನು ತಲೆಯ ಮೇಲೆ ಹೊತ್ತು ಎಲ್ಲ ಸಮುದಾಯದ ಮನೆಗಳಿಗೂ ಹೋಗಿ ನೈವ್ಯದ್ಯ ಸ್ವೀಕರಿಸುವುದು ಸುಮಾರು ವರ್ಷಗಳಿಂದ ಬಂದಿರುವ ಪದ್ದತಿ.
ಜೋಕುಮಾರ ಕುಂಬಾರ ಮನೆಯಲ್ಲಿ ಜನಿಸಿ ತಳವಾರ ಮನೆಯಲ್ಲಿ ಮೆರದಾಡಿ, ಕೇರಿಯವರ ಮನೆಯಲ್ಲಿ ಜಿಗದಾಡಿ ಕೊನೆಗೆ ದಾಸರ ಪಡಿಯಲ್ಲಿ ಮರಣ ಹೊಂದುತ್ತಾನೆ ಎಂಬುದು ಪ್ರತೀತ ಇದು ತಲ ತಲಾಂತರದಿಂದ ಆಚರಿಸುತ್ತ ಬಂದಿರುವ ಸಂಪ್ರದಾಯವಾಗಿದೆ ಎನ್ನುತ್ತಾರೆ ಗಂಗಾಮತಸ್ಥ ಸಮೂದಾಯದವರು.
ಗಣಪತಿ ಕುಳಿತ ನಾಲ್ಕನೇ ದಿನಕ್ಕೆ ಜೋಕುಮಾರ ಜನಿಸುತ್ತಾನೆ. ನಂತರ ಅವನಿಗೆ ಬೇವಿನ ತಪ್ಪಲದಿಂದ ಸಿಂಗರಿಸಿ ಬುಟ್ಟಿಯಲ್ಲಿಟ್ಟುಕೊಂಡು ಓಣಿಯಲ್ಲಿರುವ ಮನೆ ಮನೆಗೆ ಹೋಗಿ ಎಣ್ಣೆ, ಬೆಣ್ಣೆ, ಗೋಧಿ, ಜೋಳ, ಸಜ್ಜಿ ವಿವಿಧ ಧಾನ್ಯ ಸೇರಿಸಿ ಪೂಜಾ ಸಾಮಗ್ರಿಗಳನ್ನು ಹಾಗೂ ಹಣವನ್ನು ನೀಡುತ್ತಾರೆ. ಬಂದ ಧಾನ್ಯಗಳಲ್ಲಿ ಕುಂಬಾರರು, ಗಂಗಾ ಜನಾಂಗದವರು ಸೇರಿ ಹಂಚಿಕೊಳ್ಳುತ್ತಾರೆ.
ಹುಟ್ಟಿದ 7 ನೇ ದಿನಕ್ಕೆ ಜೋಕುಮಾರನ ಸಾವು :
7 ದಿನಗಳ ವರೆಗೆ ಗ್ರಾಮದಲ್ಲಿ ತಿರುಗಾಡಿ 7 ನೇ ದಿನ ಮಧ್ಯರಾತ್ರಿ ದೇವಿ ಗುಡಿ ಕಟ್ಟೆ ಮೇಲೆ ಗಂಗಾ ಜನಾಂಗದವರು ಇಟ್ಟು ಬರುತ್ತಾರೆ. ನಂತರ ಕೇರಿಯ ಜನ ಜೋಕುಮಾರನ ಮೂರ್ತಿ ಮೇಲೆ ಬಾರಿಗಿಡ ಕಟ್ಟಿಯಿಂದ ಮುಚ್ಚಿ ಆತನ ಸುತ್ತ ಸುತ್ತುತ್ತಾರೆ. ಸುತ್ತುವಾಗ ಬಾರಿ ಕಂಟ್ಟಿಗೆ ಸೀರೆ ಸಿಲುಕಿದಾಗ ಜೋಕುಮಾರ ಜಗ್ಗಿದ ಎಂದು ಬಾವಿಸಿ ಕಲ್ಲಿನಿಂದ ಒಣಕೆಯಿಂದ ತೆಲೆ ಒಡೆಯುವುದು ಪದ್ದತಿ ಇದೆ.
ನಂತರ ಅಗಸರುಬಟ್ಟೆ ತೊಳೆಯುವಾಗ ಬಟ್ಟೆಬತೊಳೆಯುವ ಕಲ್ಲಿನ ಕೆಳಗೆ ಸಿಗುತ್ತಾನೆ. ಆಗ ಅಗಸರು ಜೋಕುಮಾರನನ್ನು ಆರೈಕೆ ಮಾಡುವಾಗ ಸಾವನಪ್ಪಿದಾಗ ಅಗಸರು ಜೋಕುಮಾರನ ಮೂರು ದಿನದ ಸುತಕ ಪಾಲಿಸುವುದು ವಿಶೇಷವಾಗಿದೆ.