ಉ.ಕ ಸುದ್ದಿಜಾಲ ವಿಜಯಪುರ :
ಶಾಲಾ ಶೈಕ್ಷಣಿಕ ಪ್ರವಾಸ ವಿದ್ಯಾರ್ಥಿನಿಯ ಪ್ರಾಣಕ್ಕೆ ಕುತ್ತು ಆಯ್ತಾ! ಎಂನ ಪ್ರಶ್ನೆ ಮೂಡಿದೆ ಪ್ರವಾಸದ ಬಳಿಕ ಅನಾರೋಗ್ಯಕ್ಕೀಡಾಗಿದ್ದ 30 ಕ್ಕೂ ಅಧಿಕ ವಿದ್ಯಾರ್ಥಿಗಳು. 30ವಿದ್ಯಾರ್ಥಿಗಳ ಪೈಕಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಓರ್ವ ವಿದ್ಯಾರ್ಥಿನಿ ಸಾವನಪ್ಪಿದ್ದಾಳೆ.
ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ವಿದ್ಯಾರ್ಥಿನಿ. ಶಂಕ್ರಮ್ಮ ಮಲ್ಲನಗೌಡ ಬಿರಾದಾರ (15) ಚಿಕಿತ್ಸೆ ಫಲಿಸದೇ ಸಾವು. ತೀವ್ರ ಆರೋಗ್ಯ ಸಮಸ್ಯೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ 9 ನೇ ತರಗತಿ ವಿದ್ಯಾರ್ಥಿನಿ….
ಡಿಸೆಂಬರ್ 9 ರಿಂದ ಐದು ದಿನಗಳ ಪ್ರವಾಸಕ್ಕೆ ತೆರಳಿದ್ದ 110 ವಿದ್ಯಾರ್ಥಿಗಳು ಹೋಗಿದ್ದರು. 110 ವಿದ್ಯಾರ್ಥಿಗಳಲ್ಲಿ 30 ಕ್ಕೂ ಅಧಿಕ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಸಮಸ್ಯೆ. ದಕ್ಷಿಣ ಕರ್ನಾಟಕ ಭಾಗದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ತೆರಳಿದ್ದ ವಿದ್ಯಾರ್ಥಿಗಳು.
ಪ್ರವಾಸದ ವೇಳೆ ಉಪಾಹಾರ ಊಟ ಹಾಗೂ ವಸತಿ ಸರಿಯಾಗಿ ನೀಡದ ಆರೋಪ ಕೇಳಿ ಬಂದಿದೆ. ವಿಜಯಪುರ ತಾಲೂಕಿನ ಹೆಗಡಿಗಾಳ ಗ್ರಾಮದ ಸ್ವಾಮಿ ವಿವೇಕಾನಂದ ಫ್ರೌಢ ಶಾಲೆಯ ವಿದ್ಯಾರ್ಥಿಗಳಲ್ಲಿ ಅನಾರೋಗ್ಯ ಕಂಡು ಬಂದಿದೆ.
ಪ್ರವಾಸದ ಬಳಿಕ ಚಳಿ ಜ್ವರ ನೆಗಡಿ ಕೆಮ್ಮು ಕಫದಿಂದ ಬಳಲಿದ ವಿದ್ಯಾರ್ಥಿಗಳು. ಮೂವರು ಶಿಕ್ಷಕರು, ಓರ್ವ ಸಹಾಯಕ ವಿದ್ಯಾರ್ಥಿಗಳನ್ನು ಕರೆದುಕೊಂಡು ಶೈಕ್ಷಣಿಕ ಪ್ರವಾಸ. ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ಶಿಕ್ಷಕರಿಂದ ವಿದ್ಯಾರ್ಥಿಗಳ ನಿರ್ಲಕ್ಷ್ಯ ಆರೋಪ.
ಇದೇ ಕಾರಣದಿಂದ ನಮ್ಮ ಮಕ್ಕಳ ಆರೋಗ್ಯದಲ್ಲಿ ಸಮಸ್ಯೆಯಾಗಿದೆ ಎಂದು ಪೋಷಕರ ಮಾಹಿತಿ ನೀಡಿದ್ದು, ಅಸ್ವಸ್ಥಳಾಗಿ ಆಸ್ಪತ್ರೆಗೆ ದಾಖಲಾಗಿದ್ದ ಶಂಕ್ರಮ್ಮ ಬಿರಾದಾರ ಸಾವಿಗೆ ಶಿಕ್ಷಕರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ. ಮೃತ ವಿದ್ಯಾರ್ಥಿನಿ ಶವ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋದ ಪೋಷಕರು.