ಉ‌.ಕ ಸುದ್ದಿಜಾಲ ಕಿತ್ತೂರ :

ನ್ಯಾಯಾಲಯದ ಆದೇಶಕ್ಕೆ ನಾನು ತಲೆಬಾಗುತ್ತೇನೆ. ಆದೇಶದಂತೆ ನಾನು ಶುಕ್ರವಾರ ಬೆಂಗಳೂರು ನ್ಯಾಯಾಲಯದ ಎದುರು ಹಾಜರಾಗುತ್ತೇನೆ ಎಂದು ಶಾಸಕ ವಿನಯ್ ಕುಲಕರ್ಣಿ ಹೇಳಿದರು.

ಬಿಜೆಪಿ ಮುಖಂಡ ಯೋಗೇಶಗೌಡ ಕೊಲೆ ಪ್ರಕರಣ ಧಾರವಾಡ ಜಿಲ್ಲಾ ಪ್ರವೇಶ ನಿರ್ಬಂಧ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತರೂಗೆ ಭೇಟಿ ನೀಡಿ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಒಂದು ವೇಳೆ ಕ್ಷೇತ್ರದಲ್ಲಿ ಇಲ್ಲದೇ ಹೋದರೂ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಬಾರದು. .

ಈ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಕ್ಷೇತ್ರದಲ್ಲಿ ಯಾವುದೇ ಕೆಲಸ ನಿಲ್ಲಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಾನು ಕ್ಷೇತ್ರದಲ್ಲಿ ಇಲ್ಲದೇ ಇದ್ದರೂ ನನ್ನ ಕುಟುಂಬದವರು ಹಾಗೂ ಕಾರ್ಯಕರ್ತರಿಗ ಸಹಕಾರ ನೀಡುವಂತೆ ಹೇಳಿದ್ದೇನೆ.

ನಾನು ಕ್ಷೇತ್ರದಲ್ಲಿ ಇಲ್ಲದೇ ಇದ್ದರೂ ಫೋನ್ ಮುಖಾಂತರ ಕೆಲಸ ಮಾಡಿಸಿದ್ದೇನೆ. ನಿನ್ನೆ ಮಾಧ್ಯಮವೊಂದರಲ್ಲಿ ನಾನು ನನ್ನ ಪತ್ನಿಯನ್ನು ಪಕ್ಕ ಕೂರಿಸಿಕೊಂಡು ಅಧಿಕಾರಿಗಳ ಸಭೆ ನಡೆಸಿದ್ದೇನೆ ಎಂದು ವರದಿ‌ ಮಾಡಿದ್ದರು. ನಾನು ಕ್ಷೇತ್ರದಲ್ಲಿ ಇಲ್ಲದೇ ಹೋದಾಗ ಜನ ಮಾಧ್ಯಮದವರ ಬಳಿ ಹೋಗುವುದಿಲ್ಲ. ನಮ್ಮ ಮನೆಗೆ ಬರುತ್ತಾರೆ.

ದಯವಿಟ್ಟು ಮಾಧ್ಯಮದವರು ಸತ್ಯಾಸತ್ಯತೆ ಬಗ್ಗೆ ವಿಚಾರ ಮಾಡಬೇಕು ಎಂದು ಶಾಸಕ ವಿನಯ್ ಕೈ ಮುಗಿದ ಪ್ರಸಂಗ ನಡೆಯಿತು. ಜತೆಗೆ ಹಿಂದೆಯೂ ಕೊಂಡಿ ಮಂಚಣ್ಣ ಇದ್ದರು. ಈಗಲೂ ಅಂತವರು ಇದ್ದಾರೆ.

ಈ ಇಡೀ ಪ್ರಕರಣ ರಾಜ್ಯದ ಜನತೆಗೆ ಗೊತ್ತೇ ಇದೆ. ಜನ ಎಲ್ಲವನ್ನೂ ನೋಡುತ್ತಿದ್ದಾರೆ. ಮಾಧ್ಯಮದವರು ಯಾರದ್ದೋ ಒತ್ತಡಕ್ಕೆ ಮಣಿಯಬಾರದು. ಒತ್ತಡಕ್ಕೆ ಮಣಿದು ಏನೇನೋ ತೋರಿಸುವ ಕೆಲಸ ಆಗಬಾರದು. ಈ ಪ್ರಕರಣದ ಬಗ್ಗೆ ಮುಂದಿನ ಕಾನೂನು ಹೋರಾಟ ಮಾಡುತ್ತೇವೆ.

ಸದ್ಯ ಈ ಪ್ರಕರಣ ಕೋರ್ಟ್‌ನಲ್ಲಿದೆ. ಕೋರ್ಟ್‌ನಲ್ಲೇ ತೀರ್ಮಾನ ಆಗಲಿದೆ. ಈ ಪ್ರಕರಣದಲ್ಲಿ ನಮ್ಮ ಪಕ್ಷ ನನ್ನ ಬೆನ್ನಿಗೆ ಇದ್ದೇ ಇದೆ. ನ್ಯಾಯಾಲಯದ ಎದುರು ನಾನು ಹಾಜರಾಗುತ್ತೇನೆ ಎಂದು ಕಣ್ಣಲ್ಲಿ‌ನೀರು ತಂದು ತಂದು ಬಾವುಕರಾಗಿ ಮತಾನಾಡಿದರು.