ಉ.ಕ ಸುದ್ದಿಜಾಲ ವಿಜಯನಗರ :
ಶಿಕ್ಷಕರ ನಿರ್ಲಕ್ಷ್ಯ ಆರೋಪ ಒಂದು ಕಣ್ಣು ಕಳೆದುಕೊಂಡ 6 ವರ್ಷದ ಶಾಲಾ ಬಾಲಕ ಇಂಥದೊಂದು ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮದಲ್ಲಿ ನಡೆದಿದೆ.
ಒಂದನೇ ತರಗತಿಯಲ್ಲಿ ಓದುತ್ತಿದ್ದ ಆರು ವರ್ಷದ ಬಾಲಕ ಪ್ರಜ್ವಲ್ ಮಗನ ಕಣ್ಣು ಹೋಗಲು ಶಿಕ್ಷಕರ ನಿರ್ಲಕ್ಷ್ಯವೇ ಕಾರಣ ಅಂತ ಬಾಲಕ ಪ್ರಜ್ವಲ್ ತಂದೆಯಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚೌಡಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ಶಿಕ್ಷಕರಾದ ಸುಭಾಷಪ್ಪ ಗೊರವರ್, ಶಶಿಕುಮಾರ್ ಮತ್ತು ರವಿ ಎಂಬುವವರ ವಿರುದ್ಧ FIR ದಾಖಲು ಮಾಡಿದ ಮಗುವಿನ ತಂದೆ.. ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲು.
ಕಣ್ಣು ಗುಡ್ಡೆ ಒಡೆದು ಹೋಗಿದೆ, ಎಡಗಣ್ಣು ಕಾಣೋದಿಲ್ಲಾ ಅಂತ ವೈದ್ಯರು ಹೇಳಿದ್ದಾರೆ ಅಂತ ದೂರಿನಲ್ಲಿ ಬಾಲಕನ ತಂದೆಯಿಂದ ಉಲ್ಲೇಖ. ಬಳ್ಳಾರಿಯ ವಿಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ವಾರಕ್ಕೊಮ್ಮೆ ಮತ್ತೆ ಆಸ್ಪತ್ರೆಗೆ ಬರಬೇಕೆಂದು ವೈದ್ಯರಿಂದ ಸೂಚನೆ ನೀಡಿದ್ದಾರೆ. ನಮ್ಮ ಮಗನಿಗೆ ಕಣ್ಣು ವಾಪಾಸ್ ಬರೋಲ್ಲಾ, ಆದ್ರೆ ನಮ್ಮ ಮಗುವಿಗೆ ಆದ ರೀತಿ ಯಾರಿಗೂ ಆಗಬಾರದು ಅಂತ ಪೋಷಕರ ಒತ್ತಾಯ. ಘಟನೆಗೆ ಕಾರಣರಾದ ಶಿಕ್ಷಕರ ಮೇಲೆ ಕ್ರಮಕ್ಕೆ ಒತ್ತಾಯಿಸಿದ ಪೋಷಕರು.