ಉ.ಕ ಸುದ್ದಿಜಾಲ :
ಸುಮಾರು 70 ವರ್ಷದ ಹಿಂದೆ ಭಾರತದಲ್ಲಿ ನಾಶ ಹೊಂದಿದ್ದ ಚೀತಾಗಳು ಇಂದು ಮತ್ತೆ ಭಾರತದಲ್ಲಿ ಹೆಜ್ಜೆ ಇಟ್ಟಿವೆ. 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ನಮೀಬಿಯಾದಿಂದ ತರಿಸಲಾಗಿದ್ದು, ಇಂದು ಮಧ್ಯಪ್ರದೇಶದ ಕುನೋ ಉದ್ಯಾನವನದಲ್ಲಿ ಈ ಚೀತಾಗಳನ್ನು ಬಿಡಲಾಗಿದೆ.
ದೇಶದಲ್ಲಿ 70 ವರ್ಷಗಳ ಹಿಂದೆ ನಶಿಸಿ ಹೋಗಿದ್ದ ಆಫ್ರಿಕನ್ ಚೀತಾಗಳ ಸಂತತಿ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈ ಮಹತ್ವದ ಕ್ರಮ ಕೈಗೊಂಡಿದೆ. ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯ ಸಾಲ್ ಅರಣ್ಯದಲ್ಲಿ 1948 ರಲ್ಲಿ ಕೊನೆಯದಾಗಿ ಉಳಿದಿದ್ದ ಚೀತಾ ಸಾವನ್ನಪ್ಪಿತು. ಭಾರತದಲ್ಲಿ ವನ್ಯಜೀವಿಗಳ ಸಂರಕ್ಷಣೆ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆಯಾಗಿದೆ.