ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದೆ. ಹೆಂಡತಿ, ಮಕ್ಕಳು ಪಕ್ಕದ ರೂಮ್‌ನಲ್ಲಿ ಮಲಗಿದ್ದಾಗಲೇ ಹತ್ಯೆ ಮಾಡಲಾಗಿದೆ. ಯಾರಿಗೂ ಗೊತ್ತಾಗದಂತೆ ಕಳೆದ ರಾತ್ರಿ ಮನೆಗೆ ನುಗ್ಗಿ ಹತ್ಯೆ ಮಾಡಿ ಪರಾರಿಯಾದ ದುಷ್ಕರ್ಮಿಗಳು.
ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ಮಾಡ್ತಿದ್ದ ಸುಧೀರ್ ಕಾಂಬಳೆ (57) ಕೊಲೆಯಾದ ವ್ಯಕ್ತಿ. ಸುಧೀರ್. ಹೊಟ್ಟೆ, ಕತ್ತು, ಕೈ, ಮುಖಕ್ಕೆ ಇರಿದು ಹತ್ಯೆ ಮಾಡಿರುವ ದುಷ್ಕರ್ಮಿಗಳು. ಇತ ದುಬೈದಿಂದ ಕೊವಿಡ್ ಹಿನ್ನೆಲೆ ಎರಡು ವರ್ಷದ ಹಿಂದೆ ಬೆಳಗಾವಿಗೆ ಬಂದಿದನು.
ಸ್ಥಳಕ್ಕೆ ಕ್ಯಾಂಪ್ ಪೊಲೀಸರು, ಡಿಸಿಪಿ ರವೀಂದ್ರ ಗಡಾದಿ ಭೇಟಿ ಪರಿಶೀಲನೆ. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.