ಉ.ಕ ಸುದ್ದಿಜಾಲ ಕಾಗವಾಡ :

ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ವ್ಯಾಪ್ತಿಯ ಸಂಬರಗಿ ಗ್ರಾಮ ಪಂಚಾಯಿತಿ ಒಂದಲ್ಲ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿರುತ್ತದೆ. ಕೆಲ ದಿನಗಳ ಹಿಂದಷ್ಟೇ ಗ್ರಾಮ ಪಂಚಾಯಿತಿಯಲ್ಲಿ ಎಮ್ಮೆ ತಂದು ಕಟ್ಟಿದ ಪ್ರಕರಣ ಹಾಗೂ ಹರಿದ ತ್ರಿವರ್ಣ ಧ್ವಜ ಹಾರಾಟ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಎಡವಟ್ಟು ಮಾಡುವ ಮೂಲಕ ಸುದ್ದಿಯಾಗುತ್ತಿದೆ.

ಗ್ರಾಮದಲ್ಲಿ ನಿರ್ಮಿಸಲಾಗಿರುವ ಒಳಚರಂಡಿ ವ್ಯವಸ್ಥೆಯನ್ನ ಸರಿಯಾಗಿ ಸ್ವಚ್ಚತೆ ಮಾಡದೆ ಇರೋ ಕಾರಣ ಗ್ರಾಮದ ಒಳಚರಂಡಿಗಳು ಗಬ್ಬೆದ್ದು ನಾರುತ್ತಿವೆ. ದುರ್ವಾಸನೆ ತಡೆದುಕೊಳ್ಳಲಾದೆ ಚಿಕ್ಕ ಮಕ್ಕಳು ಗ್ರಾಮದ‌ ಒಳಚರಂಡಿ ಸ್ವಚ್ಛತೆಯನ್ನ ಮಾಡುವ ದೃಶ್ಯ ಸ್ಥಳೀಯರ ಮೋಬೈಲನಲ್ಲಿ ಸೆರೆಯಾಗಿದೆ.

ಗ್ರಾಮ ಪಂಚಾಯ್ತಿಯಲ್ಲಿ ಸುಮಾರು ಎರಡು ತಿಂಗಳಿಂದ ರಾಶಿಗಟ್ಟಲೆ ಟಿಸಿಎಲ್ ಪೌಡರ್ ಇದ್ದರೂ ಸಿಂಪಡಣೆ ಮಾಡದೇ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ತೋರಿದ್ದು ಅದ್ಯಕ್ಷರ ಅಪ್ಪಣೆ ಮೇರೆಗೆ ಸ್ವಚ್ಛತಾ ಕಾರ್ಯ ಎಂಬಂತೆ ಉಡಾಫೆ ಮಾತುಗಳು ಸಾರ್ವಜನಿಕರಿಗೆ ಸಿಗುತ್ತಿವೆ.

ಹಲವಾರು ಬಾರಿ ಮನವಿ ಮಾಡಿದ್ರೂ ಅಧ್ಯಕ್ಷರು ಹಾಗೂ ಪಿಡಿಒ ಸಾಹೇಬ್ರು ನಿರ್ಲಕ್ಷ್ಯ ಮನೋಭಾವನೆ ತಾಳಿದ್ದಾರೆ. ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನ ವ್ಯಕ್ತಪಡಿಸುತ್ತಿದ್ದಾರೆ.