ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯಲ್ಲಿ ಕೀಟನಾಶಕ ಮಾತ್ರೆ ನುಂಗಿ ಆಸ್ಪತ್ರೆಗೆ ದಾಖಲಾಗಿದ್ದ ನವವಿವಾಹಿತೆ ಸಾವು ಬೆಳಗಾವಿ ಜಿಲ್ಲೆಯ ಬೈಲಹೊಂಗಲ‌ ತಾಲೂಕಿನ ಇಂಚಲ ಗ್ರಾಮದಲ್ಲಿ ಘಟನೆ ಇಂಚಲ ಗ್ರಾಮದ ಲಕ್ಷ್ಮೀ ಮಂಜುನಾಥ ಹೂಗಾರ(22) ಮೃತ ದುರ್ದೈವಿ

ಮನೆಯಲ್ಲಿದ್ದ ಕೀಟನಾಶಕ ಮಾತ್ರೆ ನುಂಗಿದ್ದ ಮೃತ ಲಕ್ಷ್ಮೀ, ಲಕ್ಷ್ಮೀಯನ್ನು ಮೊದಲು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದ ಕುಟುಂಬಸ್ಥರು. ನಂತರ ಅಲ್ಲಿಂದ ಬೆಳಗಾವಿಯ ಬೀಮ್ಸ್ ಗೆ ರವಾನಿಸಿದ್ದ ವೈದ್ಯರು.

ಚಿಕಿತ್ಸೆ ಫಲಿಸದೆ ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಲಕ್ಷ್ಮೀ ಸಾವು. ಕಳೆದ ಡಿಸೆಂಬರ್ 7ರಂದು ಮದುವೆಯಾಗಿದ್ದ ಲಕ್ಷ್ಮೀ ಮದುವೆಯಾಗಿ ಐದು ತಿಂಗಳಿಗೆ ಆತ್ಮಹತ್ಯೆಗೆ ಶರಣಾಗಿರುವ ನವವಿವಾಹಿತೆ.

ಲಕ್ಷ್ಮೀ ಸಾವಿನ ಸುದ್ದಿ ಕೇಳಿ ಮುಗಿಲು ಮುಟ್ಟಿದ ಪೋಷಕರ ಆಕ್ರಂದನ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ