ಉ.ಕ ಸುದ್ದಿಜಾಲ ಬೈಲಹೊಂಗಲ :

ಹೊಲದಲ್ಲಿ ಕಟ್ಟಿದ್ದ ನಾಯಿನ್ನು ತಿಂದು ತೇಗಿದ ಮೊಸಳೆ, ಬೊಗಳುತ್ತಿರುವ ನಾಯಿಯನ್ನು ನೋಡಲು ಹೋದ ರೈತನಿಗೆ ಶಾಕ್, ಮೊಸಳೆ ಕಂಡು ಬೋಗಳಿದ ನಾಯಿನ್ನೆ ಆಹಾರವಾಗಿ ನುಂಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಸಮೀಪದ ಹೊಸೂರ ಗ್ರಾಮದಲ್ಲಿ ನಡೆದಿದೆ.

ಭಯಬೀತರಾದ ರೈತರು ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ ಹೊಸೂರ ಗ್ರಾಮಸ್ಥರು. ಮಾಹಿತಿ ನೀಡಿದ್ರು ಸ್ಥಳಕ್ಕೆ ಬಾರದ ಅರಣ್ಯ ಇಲಾಖೆಯ ಸಿಬ್ಬಂದಿಗಳು.

ಸೆರೆ ಹಿಡಿಯಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ ಎನ್ನುತ್ತಲೇ ಅರ್ಧ ದಿನ ಕಳೆದ ಅರಣ್ಯಧಿಕಾರಿಗಳು. ಅರಣ್ಯ ಇಲಾಖೆಗೆ ಬೇಸತ್ತು ಸ್ಥಳೀಯರಿಂದ ಮೊಸಳೆ ಆಪರೇಶನ್. ಬೇಜವಾಬ್ದಾರಿ ತೋರಿದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ.

ಕಳೆದೆರೆಡ್ಮೂರು ದಿನಗಳ ಹಿಂದೆ ಸುರಿದ ಬಾರಿ ಮಳೆಗೆ ಗ್ರಾಮದ ಸೇತುವೆ ಮೇಲಿಂದ ನದಿಗೆ ನೀರು ಹರಿದ ಪರಿಣಾಮ. ನದಿಯಲಿದ್ದ ಮೊಸಳೆ ರೈತರ ಜಮೀನಿಗೆ ನುಗ್ಗಿದೆ.