ಉ.ಕ ಸುದ್ದಿಜಾಲ ಹಾಸನ :

ಸಾರಿಗೆ ಬಸ್, ಟಿಟಿ ವಾಹನ ಹಾಗೂ ಟ್ಯಾಂಕರ್ ನಡುವೆ ಭೀಕರ ಸರಣಿ ಅಪಘಾತ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಾಂಧಿನಗರದ ಬಳಿ ಭೀಕರ ರಸ್ತೆ ಅಪಘಾತ ಪ್ರಕರಣ ಟಿಟಿ ವಾಹನ ಹಾಗು ಕೆಎಂಎಫ್ ಹಾಲಿನ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸ್ಥಳದಲ್ಲಿ ಒಂಬತ್ತು ಜನರ ಸಾವು. ಹತ್ತು ಜನರಿಗೆ ಗಾಯ.

ಒಂದೇ ಗ್ರಾಮದ ಏಳು ಜನರು ಹಾಗು ಮತ್ತೊಂದು ಗ್ರಾಮದ ಇಬ್ಬರ ಸಾವು ಸಾಲಾಪುರ (ಹಳ್ಳಿಕೆರೆ) ಗ್ರಾಮದ 7 ಹಾಗು ದೊಡ್ಡೇನಹಳ್ಳಿ ಗ್ರಾಮದ ಇಬ್ಬರು ಸಾವು ಧರ್ಮಸ್ಥಳ, ಸುಬ್ರಹ್ಮಣ್ಯ, ಹಾಸನಾಂಬೆ ದರ್ಶನ ಮುಗಿಸಿ ವಾಪಸ್ ಊರಿಗೆ ಮರಳುತ್ತಿದ್ದ ಕುಟುಂಬ ಸದಸ್ಯರು.

ಸಂಬಂಧಿಕರೆಲ್ಲಾ ಜಂಟಿಯಾಗಿ ಧಾರ್ಮಿಕ ಕ್ಷೇತ್ರದ ದರ್ಶನಕ್ಕೆ ತೆರಳಿದ್ದ ವೇಳೆ ಅಪಘಾತ ದೊಡ್ಡೇನಹಳ್ಳಿಯ ಕಂದಮ್ಮ ದ್ರುವ (2) ಹಾಗೂ ತನ್ಮಯ್ (10) ಹಾಗೂ ಸಾಲಾಪುರದ ಲೀಲಾವತಿ (50) ಚೈತ್ರ (33), ಸಮರ್ಥ (10) ಡಿಂಪಿ (12) ವಂದನ (20), ದೊಡ್ಡಯ್ಯ (60), ಭಾರತಿ(50) ಸಾವು ಒಂಭತ್ತು ಮಂದಿ ಸಾವು, ಹತ್ತು ಮಂದಿಗೆ ಗಾಯ.

ಧರ್ಮಸ್ಥಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಟಿಟಿ ವಾಹನ ಗಾಯಾಳುಗಳು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಣಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.