ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ತಾಲ್ಲೂಕಿನ ನಾವಗೆ ಗ್ರಾಮದಲ್ಲಿ ಈಚೆಗೆ ಕಲ್ಲು ತೂರಾಟ ಮಾಡಿ ಮೂರು ಮನೆ ಹಾಗೂ ನಾಲ್ಕು ವಾಹನಗಳಿಗೆ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಆರೋಪಿಗಳನ್ನು ಬಂಧಿಸಲಾಗಿದೆ.
ಬಾದರವಾಡಿಯ ಹರೀಶ್ವರನಾಥ ನಾರಾಯಣ ಪಾಟೀಲ (24), ಭರಮನಿ ಬಾಳು ನಾಯಕ್ (24), ಉದ್ಯಮಭಾಗದ ಸಂತೋಷ ಗೋವಿಂದ ದೇವಟಗಿ (23), ಸುನೀಲ ಗೋವಿಂದ ದೇವಟಗಿ (26), ವಡಗಾವಿಯ ನಾಗರಾಜ ತುಕಾರಾಮ ಹಜೇರಿ (25) ಅವರನ್ನು ಗುರುವಾರ ಬಂಧಿಸಲಾಗಿದೆ.
ಕಾಕತಿಯ ದೀಪಕ್ ರಾಯಪ್ಪ ಬಸಪ್ಪನವರ (21), ಬಾದರವಾಡಿಯ ಜ್ಯೋತಿಬಾ ರಾಮಾ ಬೆಳವಟಕರ (26), ಜ್ಯೋತಿಬಾ ಲಕ್ಷ್ಮಣ ಮುಳಿಕ್ (28), ತೀರ್ಥಕುಂಡೆ ಗ್ರಾಮದ ವಿಠ್ಠಲ ದುರ್ಗಪ್ಪ ಸಂಜಿಮನಿ (21) ಅವರನ್ನು ಶುಕ್ರವಾರ ಬಂಧಿಸಲಾಗಿದೆ.
ಪ್ರೇಮ ಪ್ರಕರಣವೊಂದರಲ್ಲಿ ಬುದ್ಧಿವಾದ ಹೇಳಿದ ಪಂಚರಾದ ಮಾರುತಿ ಹುರಕಡ್ಲಿ, ಸಂಜಯ ಹುಂದರವಾಡಿ ಮತ್ತು ಇನ್ನೊಬ್ಬರ ಮನೆ ಮೇಲೆ ಕಲ್ಲು ತೂರಲಾಗಿತ್ತು. ದೂರು ಆಧರಿಸಿ ಇವರನ್ನು ಬಂಧಿ ಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.