ಉ.ಕ ಸುದ್ದಿಜಾಲ ಅಥಣಿ :

ಇದೇ ಶನಿವಾರ ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮೀತ ಷಾ ಆಗಮಿಸಲಿದ್ದಾರೆ‌ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಸವದಿ ಹೇಳಿದರು.

ಅಥಣಿಯಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡ ವಿಜಯ ಸಂಕಲ್ಪ ಅಭಿಯಾನದಲ್ಲಿ ಮನೆ ಮನೆಗೆ ಭೇಟಿ ನೀಡಿ ಬಿಜೆಪಿ ಸಾಧನೆಗಳ ಕುರಿತು ಜನಸಾಮಾನ್ಯರ ಗಮನ ಸೆಳೆಯುವ ಮೂಲಕ  ವಾರ್ಡ ನಂಬರ ಎರಡರಲ್ಲಿ ಭಾಗವಹಿಸಿದರು.

ಪುರಸಭೆ ಸದಸ್ಯ ಕಲ್ಲೇಶ ಮಡ್ಡಿ ಅವರ ನಿವಾಸಕ್ಕೆ ಬಿಜೆಪಿಯೇ ಭರವಸೆ ಎಂಬ ನಾಮ ಫಲಕ ಅಳವಡಿಸಿ ವಿಜಯ ಸಂಕಲ್ಪ ಯಾತ್ರೆಯ ಮೂಲಕ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ಸಾಧನೆಗಳನ್ನು ಸಾರ್ವಜನಿಕರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ನಾವು  ಸಂಕಲ್ಪ ಮಾಡಬೇಕು ಮತ್ತು  ನಮ್ಮ‌ ಸರಕಾರದ ಸಾಧನೆಗಳನ್ನು ತಿಳಿಸಿದಾಗ ಮಾತ್ರ ಜನರ ಆಶೀರ್ವಾದ ಪಡೆಯಲು ಸಾಧ್ಯ ಎಂದರು.