ಉ.ಕ ಸುದ್ದಿಜಾಲ ಅಥಣಿ :

ಮುನಿರತ್ನ ಬಂಧನ ವಿಚಾರ ಸ್ವಪಕ್ಷದ ಬಿಜೆಪಿ ನಾಯಕರ ವಿರುದ್ಧ ರಮೇಶ್ ಜಾರಕಿಹೊಳಿ ಕೆಂಡಾಮಂಡಲ ಅಥಣಿಯಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕ ರಮೇಶ ಜಾರಕಿಹೋಳಿ.

ಸ್ವಪಕ್ಷದ ಬಿಜೆಪಿ ನಾಯಕರ ವಿರುದ್ಧ ರಮೇಶ್ ಜಾರಕಿಹೊಳಿ ಕೆಂಡಾಮಂಡಲ

ಮುನಿರತ್ನ ಬೈದಿರುವುದು ಪ್ರೂ ಆಗಿಲ್ಲ. ಅವಾಗಲೇ ನಮ್ಮ ಬಿಜೆಪಿ ನಾಯಕರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಫ್ ಎಸ್ ಎಲ್ ವರದಿ ಬರುವರಿಗೆ ನಮ್ಮವರು ಮಾತನಾಡಬಾರದು.

ವಿಜಯಪುರ ಸಂಸದ ರಮೇಶ ಜಿಗಿಜಣಿಗಿ ವಿರುದ್ಧ ತೀವ್ರವಾಗಿ ಬೇಸರ ವ್ಯಕ್ತಪಡಿಸಿದ ಜಾರಕಿಹೊಳಿ. ಮುನಿರತ್ನ ಮೇಲೆ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕರಿಗೆ ಒತ್ತಾಯ ಮಾಡಿದ್ದಾರೆ ಅವರು ಹಿಂದೆ ಮುಂದೆ ನೋಡದೆ ಈ ರೀತಿ ಮಾತನಾಡುತ್ತಿದ್ದಾರೆ.

ಆರ್ ಅಶೋಕ ಕೂಡ ಮುನಿರತ್ನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುನಿರತ್ನ ಬೈದಿರುವುದು ದೃಢವಾಗಿಲ್ಲ. ಮುನಿರತ್ನ ಬೈದಿರುವ ಆಡಿಯೋ ಕಟ್ ಆಂಟ್ ಪೆಸ್ಟ ಇರಬಹುದು.

ನಮ್ಮ ಬಿಜೆಪಿ ನಾಯಕರೇ ಬಯ್ಯೋದು ಎಷ್ಟರ ಮಟ್ಟಿಗೆ ಸರಿ. ಮುನಿರತ್ನ ವಿಚಾರದಲ್ಲಿ ಬಿಜೆಪಿ ನಾಯಕರು ದುಡಿಕಿ ನಿರ್ಧಾರ ಮಾಡುತ್ತಿದ್ದಾರೆ. ಅವರ ವಿರುದ್ಧ ಬಿಜೆಪಿ ವರಿಷ್ಠರು ನೋಟಿಸ್ ಜಾರಿ ಮಾಡಬೇಕು.

ಡಿಕೆ ಶಿವಕುಮಾರ್ ಈ ಕೆಲಸ ಬಿಟ್ಟರೆ ಬೇರೆ ಒಂದು ಕೆಲಸವಿಲ್ಲ. ಅವನು ಯಾವುದೇ ಹೋರಾಟದಿಂದ ಬೆಳೆದಿಲ್ಲ ಗ್ರಾಮ ಪಂಚಾಯತ್ ಮೆಂಬರ್ ಆಗೋಕೂ ಕೂಡ ಅವನು ಲಾಯಕ್ಕಿಲ್ಲ. ಅಡ್ಜಸ್ಟ್ಮೆಂಟ್ ರಾಜಕಾರಣಿ ಆಗಿದ್ದರಿಂದ ಏಳೆಂಟು ಸಲ ಎಮ್ಎಲ್ಎ ಆಗಿದ್ದಾನೆ.

ಮುಂದಿನ ಸಲವೂ ಕೂಡ ಡಿಕೆ ಶಿವಕುಮಾರ್ ಸೋಲುತ್ತಾನೆ. ಮೊನ್ನೆ ಲೋಕಸಭಾ ಚುನಾವಣೆಯಲ್ಲಿ ಡಿಕೆ ಸುರೇಶ್ ಎರಡೂವರೆ ಲಕ್ಷದಿಂದ ಸೋತನು. ಡಿಕೆ ಶಿವಕುಮಾರ್ ಅರ್ಜಂಟ್ಸ ಮಾಡಿಕೊಂಡು ಕಾಲು ಬಿದ್ದು ಎಂಎಲ್ಎ ಆಗಿದ್ದಾನೆ.

ನನ್ನ ಮತ್ತು ದೇವೇಗೌಡ ಕುಟುಂಬ ಮತ್ತು ಮುನಿರತ್ನ ಕೆಟ್ಟ ಪರಿಸ್ಥಿತಿ ಬಂದಿದೆ. ಮುಂದೆ ಹಲವು ಕಾಂಗ್ರೆಸ್ ನಾಯಕರಿಗೆ ಒನ್-ಟು-ತ್ರೀ ಫೋರ್ ನಾಯಕರಿಗೆ ಈ ಪರಿಸ್ಥಿತಿ ಬರಲಿದೆ.

ಮುನಿರತ್ನ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಕಂಪನಿ ಇದೇ ಎಂದು ರಮೇಶ್ ಆರೋಪ ಮಾಡಿದ್ದು, ಮುನಿರತ್ನ ಪ್ರಕರಣವನ್ನು ಸಿಬಿಐ ಕೊಡಬೇಕು ಸತ್ಯಾಸತ್ಯತೆ ಹೊರಗೆ ಬರುತ್ತದೆ ಎನ್ನುತ್ತಾರೆ ರಮೇಶ ಜಾರಕಿಹೋಳಿ