ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯಲ್ಲಿಂದು ಐತಿಹಾಸಿಕ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ ಹಿನ್ನೆಲೆ. ಬೆಳಗಾವಿಯಲ್ಲಿ ಹೈಅಲರ್ಟ್ ಬೆಳಗಾವಿ ಮಹಾನಗರದಲ್ಲಿ 400ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳ ಅದ್ಧೂರಿ ವಿಸರ್ಜನೆ.

ರಾಜ್ಯದಲ್ಲಿ ಮೊದಲ ಬಾರಿಗೆ ಬೆಳಗಾವಿಯಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಟಾಪನೆ ಹೆಗ್ಗಳಿಕೆ. 1905ರಲ್ಲಿ ಬಾಲಗಂಗಾಧರ ತಿಲಕರು ಬೆಳಗಾವಿ ಝೇಂಡಾ ಚೌಕ್ ನಲ್ಲಿ ಮೊದಲ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಟಾಪನೆ. ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್.

ಮಹಾರಾಷ್ಟ್ರ ಮಾದರಿಯಲ್ಲಿ ಅದ್ಧೂರಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ. ಗಣೇಶೋತ್ಸವ ಮೆರವಣಿಗೆ ವೀಕ್ಷಿಸಲು ಬೇರೆ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರ ಆಗಮನ ಹೀಗಾಗಿ ಭದ್ರತೆಗೆ ನೆರೆ ಜಿಲ್ಲೆಯಿಂದಲೂ ಆಗಮಿಸಿದ ಸಾವಿರಾರು ಪೊಲೀಸ್ ಸಿಬ್ಬಂದಿ

ಐಪಿಎಸ್ ಶ್ರೇಣಿ 07, 04ಡಿವೈಎಸ್‌ಪಿ ಸೇರಿ 4 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳ ಭದ್ರತೆಗೆ ನಿಯೋಜನೆ ಮಾಡಲಾಗಿದೆ. 109 ಪಿಐಗಳು, 130 ಪಿಐಗಳು, 3200 ಪೊಲೀಸ್ ಪೇದೆಗಳು, 500 ಗೃಹ ರಕ್ಷಕ ಸಿಬ್ಬಂದಿಗಳು, 10ಕೆಎಸ್ ಆರ್ ಪಿ ತುಕಡಿಗಳ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಮೆರವಣಿಗೆ ಮೇಲೆ ಕಣ್ಣಿಡಲು ಸಿಸಿ ಕ್ಯಾಮೆರಾ, ದ್ರೋಣ ಕ್ಯಾಮೆರಾದಲ್ಲಿ ಕಣ್ಗಾವಲು. ಕಳೆದೊಂದು ವಾರದಿಂದ ಬೆಳಗಾವಿ ಸೂಕ್ಷ್ಮ ಪ್ರದೇಶದಲ್ಲಿ ರೂಟ್ ಮಾರ್ಚ್ ಮಾಡ್ತಿರುವ ಪೊಲೀಸ್ ಇಲಾಖೆ.