ಉ.ಕ ಸುದ್ದಿಜಾಲ ನಿಪ್ಪಾಣಿ :

ಸರಣಿ ಅಪಘಾತ ಓರ್ವ ಸಾವು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರ ಹೊರವಲಯದ ಸ್ತವನಿಧಿ ಘಟ್ಟದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ವಿವಿಧ ವಾಹನಗಳ ಮಧ್ಯೆ ಸಂಭವಿಸಿದ ಸರಣಿ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಜಾಂಬೋಟಿಯ ನಾರಾಯಣ ನಾಗು ಪಾರವಾಳಕರ (65) ಮೃತ ವ್ಯಕ್ತಿ ಜಾಂಬೋಟಿಯ ರೇಷ್ಮಾ ಕುಡತುರಕರ (45) ಹಾಗೂ ಶಂಕರ ಪಾರವಾಳಕರ(28) ಗಂಭೀರವಾಗಿ ಗಾಯ.

ವೈದ್ಯಕೀಯ ಚಿಕಿತ್ಸೆಗಾಗಿ ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. 15 ಜನರಿಗೆ ಸಣ್ಣ–ಪುಟ್ಟ ಗಾಯವಾಗಿವೆ. ತಮಿಳುನಾಡಿನಿಂದ ನಿಪ್ಪಾಣಿ ಮಾರ್ಗವಾಗಿ ಮುಂಬೈಗೆ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಜೀಪ್‌ಗೆ ಗುದ್ದಿದೆ.

ಜಿಪ್‌ಗೆ ಗುದ್ದಿದ ಪರಿಣಾಮ ರಸ್ತೆಯ ಮತ್ತೊಂದು ಬದಿಯಲ್ಲಿದ್ದ ಎರಡು ಕಾರು ಮತ್ತು ಒಂದು ದ್ವಿಚಕ್ರ ವಾಹನಕ್ಕೆ ಅಪ್ಪಳಿಸಿದೆ. ಜೀಪ್‌ ಅಪ್ಪಳಿಸದ ಪರಿಣಾಮ ಜಿಪ್‌ನಲ್ಲಿದ್ದ ವ್ಯಕ್ತಿ ನಾರಾಯಣ ಮೃತಪಟ್ಟಿದ್ದಾರೆ.

ಜಾಂಬೋಟಿ ಗ್ರಾಮಸ್ಥರು ಕೊಲ್ಹಾಪುರದ ಮಹಾಲಕ್ಷ್ಮಿ ದೇವಿ ಮತ್ತು ಜ್ಯೋತಿಬಾ ದೇವಸ್ಥಾನಕ್ಕೆ ಹೊರಟಿದ್ದರು. ಈ ಕುರಿತು ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.